ಸುದ್ದಿ ಕನ್ನಡ ವಾರ್ತೆ
ಜೋಯಿಡಾ ;ಕರ್ನಾಟಕ ದಲ್ಲಿ ಅಧಿಕಾರ ದಲ್ಲಿರುವ ಕಾಂಗ್ರೆಸ್ ಪಕ್ಷದಲ್ಲಿ ಬದಲಾವಣೆ ತರುವ ಕೆಲಸ ನಡೆದಿದೆ.
ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರೂ ಈಗ ಬದಲಾಗಿದ್ದಾರೆ. ನ್ಯಾಯವಾದಿ ಜಿ ಟಿ ನಾಯ್ಕ್ ರವರು ಜಿಲ್ಲಾ ಅಧ್ಯಕ್ಷ ರಾದ ಮೇಲೆ ಜಿಲ್ಲೆಯ ಎಲ್ಲ ತಾಲೂಕುಗಳ ಅಧ್ಯಕ್ಷರ ಬದಲಾವಣೆ ಪ್ರಕ್ರಿಯೆ ನಿಯಮದಂತೆ ನಡೆಸಲು ತೀರ್ಮಾನಿಸಲಾಗಿದೆ.ಇದಕ್ಕೆ ಜೋಯಿಡಾ ಕೂಡ ಹೊರತಾಗಿಲ್ಲ. ಇಲ್ಲಿ ಕೂಡ ಪಕ್ಷಕ್ಕೆ ಟಾನಿಕ್ ನೀಡಬಲ್ಲ ವ್ಯಕ್ತಿಯನ್ನು ಹುಡುಕಲಾಗಿದೆ ಎಂಬ ಮಾಹಿತಿ ಪಕ್ಷದ ಮೂಲ ಗಳಿಂದ ತಿಳಿದು ಬಂದಿದೆ.ಕೇವಲ ಘೋಷಣೆ ಮಾತ್ರ ಬಾಕಿ ಇದೆ ಎಂಬ ಮಾಹಿತಿ ಲಭ್ಯ ವಾಗಿದೆ.
ಮೂಲಗಳ ಪ್ರಕಾರ ಉತ್ಸಾಹಿ ಯುವಕರಿಗೆ ಆದ್ಯತೆ ನೀಡಿದ್ದು ಸಮಾಜದ ಎಲ್ಲ ವರ್ಗಗಳ ಜನರನ್ನು ಒಗ್ಗೂಡಿಸಿ ಪಕ್ಷ ಬೆಳೆಸುವ ವ್ಯಕ್ತಿ ಯನ್ನು ಗಣನೆಗೆ ತೆಗೆದು ಕೊಳ್ಳಲಾಗಿದೆ,ಪಕ್ಷದ ವಿವಿಧ ವಿಬಾಗ ಗಳಿಂದ ಕೂಡ ವರಿಷ್ಠರು ಬಂದಾಗ ತಾಲೂಕಿಗೆ ಅಧ್ಯಕ್ಷರು ಯಾರಾಗ ಬೇಕು ಎಂದು ವರಿಷ್ಠ ರಿಗೆ ಪತ್ರ ನೀಡಿದ ಬಗ್ಗೆ ಮಾಹಿತಿ ಲಭ್ಯ ವಾಗಿದೆ. ಒಟ್ಟಾರೆ ತಾಲೂಕಿನ ಕಾಂಗ್ರೇಸ್ ಪಕ್ಷಕ್ಕೆ ಹೊಸ ಅಧ್ಯಕ್ಷರು ಸದ್ಯದಲ್ಲೇ ಬರಲಿದ್ದಾರೆ.ಅದು,, ಯಾರು ಎಂಬಪ್ರಶ್ನೆ ಮಾತ್ರ ಬಾಕಿ ಉಳಿದಿದೆ.
ಯಾವುದೇ ಪಕ್ಷದ ಬೆಳವಣಿಗೆ ಆಗಬೇಕಾದರೆ ಆ ಪಕ್ಷದ ಅಧ್ಯಕ್ಷ ರಾಗುವವರಿಗೆ ಪಕ್ಷ ಬೆಳೆಸುವ ಹುಮ್ಮಸ್ಸು ಇರಬೇಕಾಗುತ್ತದೆ. ಅಧಿಕಾರಕ್ಕಾಗಿ ಖುರ್ಚಿ ಹಿಡಿದು ಕುಳಿತರೆ ಅಂಥವರಿಂದ ಪಕ್ಷ ಬೆಳೆಯುವುದಿಲ್ಲ ಎಂದು ಕಾಂಗ್ರೆಸ್ ಪಕ್ಷ ತಿಳಿದು ಕೊಂಡಿದೆ. ರಾಜ್ಯದಲ್ಲಿ ಪಕ್ಷದ ವಿವಿಧ ವಿಭಾಗ ಗಳಲ್ಲಿ ಸಮಗ್ರ ಬದಲಾವಣೆಗೆ ತೀರ್ಮಾನ ಮಾಡಿದಂತೆ ತಾಲೂಕಿನಲ್ಲಿ ಕೂಡ ಪಕ್ಷದ ಬೆಳವಣಿಗೆಗೆ ಒತ್ತು ನೀಡಿದಂತೆ ಕಂಡು ಬಂದಿದೆ ತಾಲೂಕಿನ ಕಾಂಗ್ರೇಸ್ ಪಕ್ಷಕ್ಕೆ ನೂತನ ಸಾರಥಿ ಯಂತೂ ಬಂದೆ ಬರುತ್ತಾರೆ, ಅದು ಯಾರು ಎಂಬ ಮಾಹಿತಿ ಅಷ್ಟೇ ಬರಬೇಕಾಗಿದೆ.
