Banner Ad

ಸುದ್ದಿ ಕನ್ನಡ ವಾರ್ತೆ

ಹಳಿಯಾಳ :ರಾಜ್ಯದಲ್ಲಿ ಮುಂಗಾರು ಮಳೆಯ ಕೊರತೆಯಿಂದಾಗಿ ನನ್ನ ವಿಧಾನಸಭಾ ಕ್ಷೇತ್ರದ ಹಳಿಯಾಳ,ದಾಂಡೇಲಿ ಹಾಗೂ ಜೋಯಿಡಾ ತಾಲೂಕುಗಳ ರೈತರು ಎದುರಿಸುತ್ತಿರುವ ಸಂಕಷ್ಟವನ್ನು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಗಮನಕ್ಕೆ ತಂದು ಮನವಿ ಸಲ್ಲಿಸಿದ್ದೆನು.ಈ ಮನವಿಗೆ ಸ್ಪಂದಿಸಿ, ಮೊದಲ ಹಂತದಲ್ಲಿ ಹಳಿಯಾಳ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಿಸಲಾಗಿತ್ತು.
ಇದೀಗ ವೈಜ್ಞಾನಿಕ ಪರಿಶೀಲನೆ,ಪಾರದರ್ಶಕ ಸಮೀಕ್ಷೆ ಹಾಗೂ ನಿಖರ ವರದಿಗಳ ಆಧಾರದ ಮೇಲೆ ಸರ್ಕಾರ ದಾಂಡೇಲಿ ಮತ್ತು ಜೋಯಿಡಾ (ಸೂಪಾ) ತಾಲೂಕುಗಳನ್ನೂ ಬರಪೀಡಿತ ಪ್ರದೇಶಗಳೆಂದು ಘೋಷಿಸಿರುವುದು ಸಂತಸದ ಹಾಗೂ ರೈತಪರ ನಿರ್ಧಾರವಾಗಿದೆ. ಎಂದು ಶಾಸಕ ಆರ್ ವಿ ದೇಶಪಾಂಡೆ ಹೇಳಿಕೆ ನೀಡಿದ್ದಾರೆ.

Banner Ad

ಈ ನಿರ್ಧಾರದಿಂದ ಬರದ ಸಂಕಷ್ಟ ಎದುರಿಸುತ್ತಿರುವ ರೈತರಿಗೆ ಸರ್ಕಾರದ ವಿವಿಧ ಪರಿಹಾರ ಮತ್ತು ನೆರವು ದೊರೆಯಲು ಅನುಕೂಲವಾಗಲಿದ್ದು ರೈತರ ಹಿತಾಸಕ್ತಿಯನ್ನು ಆದ್ಯತೆಯಾಗಿ ಪರಿಗಣಿಸಿ, ಅವರ ಸಂಕಷ್ಟಕ್ಕೆ ಸ್ಪಂದಿಸಿರುವ ಮಾನ್ಯ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕಂದಾಯ ಸಚಿವರು ಮತ್ತು ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಎಂದು ಹಳಿಯಾಳ ಜೋಯಿಡಾ ಕ್ಷೆತ್ರದ ಶಾಸಕರು ಆಡಳಿತ ಸುಧಾರಣಾ ಸಮಿತಿ ಅಧ್ಯಕ್ಷರು ಆದ ಆರ್ ವಿ ದೇಶಪಾಂಡೆ ಅವರು ಹೇಳಿದ್ದಾರೆ.

Banner Ad