ಸುದ್ದಿ ಕನ್ನಡ
ಜೋಯಿಡಾ ತಾಲೂಕಿನಲ್ಲಿರುವ *ಅಭಿವೃದ್ಧಿ ಪಥ * ಬಸ್ ನಿಲ್ದಾಣ (ಬಸ್ ಸೆಲಟರ್ )ಗಳನ್ನು ಕೂಡಲೇ ಪರಿಶೀಲಿಸಿ ಅಗತ್ಯ ಕ್ರಮ ಕೈ ಕೊಳ್ಳಬೇಕೆಂದು ಶಾಸಕರು, ಸರಕಾರದ ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಅವರು ಹೇಳಿದ್ದಾರೆ.
ಅಷ್ಟೇ ಅಲ್ಲ ಈ ಕೆಲಸಕ್ಕೆ ಅಗತ್ಯ ವಿರುವ ತಂಡ ವನ್ನೂ ಕೂಡ ಕಳಿಸಿ ಕೊಟ್ಟಿದ್ದಾರೆ.ಇದರಿಂದ ನಾಗೋಡಕ್ರಾಸ್ ನಲ್ಲಿ ಬುಧವಾರ ಬಿದ್ದ ಬಸ್ ಸೆಲಟರನ್ನು ಸರಿಪಡಿಸಲಾಗಿದೆ.
ಇದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರ ವಾಗಿದೆ.ಕೂಡಲೇ ಸ್ಪಂದಿಸಿದ ಶಾಸಕರನ್ನು ಜನತೆ ಅಭಿನಂದಿಸಿದ್ದಾರೆ.ತಾಲೂಕಿನಲ್ಲಿರುವ ಅಭಿವೃದ್ಧಿ ಪಥ ಎಲ್ಲ ಬಸ್ ಸೆಲಟರ್ ಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈ ಕೊಳ್ಳಲು ಹೇಳಿದ್ದುಮೆಚ್ಚುಗೆಗೆ ಪಾತ್ರ ವಾಗಿದೆ. ಕಳೆದ ಬುಧವಾರ ನಾಗೋಡ ಕ್ರಾಸ್ ಬಸ್ ಸೆಲಟರ್ ಬಿದ್ದು ಜೋಯಿಡಾದ ಕಾಲೇಜು ವಿದ್ಯಾರ್ಥಿನಿ ಸ್ವಾತಿ ತನ್ನ ಬಲ ಕಾಲನ್ನು ಮುರಿದು ಕೊಂಡಿದ್ದಳು, ಈ ವಿಷಯ ವನ್ನು ಶಾಸಕರ ಗಮನಕ್ಕೆ ತಂದ ಜೋಯಿಡಾ ದ ಕಾಂಗ್ರೆಸ್ ಮಾಜಿ ಅಧ್ಯಕ್ಷ ವಿನಯ್ ದೇಸಾಯಿ ಅವರ ಕ್ರಮ ಮೆಚ್ಚುಗೆಗೆ ಪಾತ್ರವಾಗಿದೆ. ಒಟ್ಟಾರೆ ಶಾಸಕ ರಾದ ದೇಶಪಾಂಡೆ ಅವರ ತ್ವರಿತ ಕ್ರಮ ಉತ್ತಮ ಫಲಿತಾಂಶ ತಂದಿದೆ. ನಾಗೋಡ ಗ್ರಾಮ ಪಂಚಾಯತ್ ಕೂಡ ಕಾಲಿಗೆ ಪೆಟ್ಟು ಮಾಡಿಕೊಂಡಿರುವ ವಿದ್ಯಾರ್ಥಿನಿ ಸ್ವಾತಿ ಅವಳಿಗೆ 5 ಸಾವಿರ ರೂಪಾಯಿ ನೀಡುವ ಮೂಲಕ ಮಾನವೀಯತೆ ತೋರಿರುವುದು ಜನರ ಮೆಚ್ಚುಗೆ ಗಳಿಸಿದೆ.
