ಸುದ್ದಿ ಕನ್ನಡ
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ವಿರೋಧದ ನಡುವೆಯೂ ಕೂಡ ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ಈಗಾಗಲೇ ಸಮ್ಮತಿ ನೀಡಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಯು ಜಿಲ್ಲೆಯ ಜನತೆಗೆ ಇನ್ನಷ್ಟು ಆತಂಕ ನೋಡುವಂತೆ ಮಾಡಿದೆ.
ಇಂದು ಹಾವೇರಿಗೆ ಆಗಮಿಸಿದ್ದ ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್- ಮಾಧ್ಯಮ ಗಳಿಗೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸುತ್ತಾ ಈಗಾಗಲೇ ಬೇಡ್ತಿ ವರದಾ ನದಿ ಜೋಡಣೆ ಯೋಜನೆಗೆ ಕರ್ನಾಟಕ ರಾಜ್ಯ ಸರ್ಕಾರ ಸಮ್ಮತಿ ನೀಡಿದೆ ಎಂದು ಹೇಳಿಕೆ ನೀಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಪರಿಸರಕ್ಕೆ ಮಾರಕವಾಗಿರುವ ಈ ಯೋಜನೆ ವಿರೋಧಿಸಿ ಹೋರಾಟ ಮುಂದುವರಿದಿದೆ. ಆದರೆ ಕರ್ನಾಟಕ ಸರ್ಕಾರವು ಡಿಪಿಆರ್ ಸಿದ್ಧಪಡಿಸುವ ಕಾರ್ಯ ಕೈಗೊತ್ತಿಕೊಂಡಿದೆ. ವೈಮಾನಿಕ ಸಮೀಕ್ಷೆಯನ್ನು ಮುಂದುವರಿಸಿದೆ. ಪ್ರತಿದಿನ ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಅತ್ಯಂತ ಕೆಳಮಟ್ಟದಲ್ಲಿ ವಿಮಾನ ಹಾರಾಟ ನಡೆಯುತ್ತಲೇ ಇದೆ. ಶುಕ್ರವಾರ ತಾಲೂಕಿನ ಕೊಡ್ಲಗದ್ದೆ ಭಾಗದಲ್ಲಿ ವೈಮಾನಿಕ ಸಮೀಕ್ಷೆ ಮುಂದುವರೆದಿತ್ತು.
ನದಿ ತಿರುವು ಯೋಜನೆಗೆ ಜಿಲ್ಲೆಯಾದ್ಯಂತ ಭಾರಿ ವಿರೋಧ ಇರುವ ಹಿನ್ನೆಲೆಯಲ್ಲಿ ಸರ್ಕಾರವು ಈ ಯೋಜನೆಯನ್ನು ಕೈ ಬಿಡಲಿದೆ ಎಂಬ ವಿಶ್ವಾಸ ಜನರಲ್ಲಿ ಇತ್ತು. ಆದರೆ ಖುದ್ದಾಗಿ ಇಂದು ಕರ್ನಾಟಕದ ಮುಖ್ಯಮಂತ್ರಿಗಳೇ ಈ ಹೇಳಿಕೆ ನೀಡಿರುವುದು ಇನ್ನಷ್ಟು ಆತಂಕ ಹೆಚ್ಚುವಂತೆ ಮಾಡಿದೆ. ಯೋಜನೆಗೆ ಸಂಬಂಧಿಸಿ ನೀಡಿದ್ದು ಈ ಯೋಜನೆ ಅದರ ಪಾಡಿಗೆ ಅದು ಮುಂದುವರೆದು ಕೊಂಡು ಹೋಗಲಿದೆ ಎಂಬ ಹೇಳಿಕೆಯನ್ನು ಕರ್ನಾಟಕ ಮುಖ್ಯಮಂತ್ರಿ ಡಿಕೆಶಿ ನೀಡಿದ್ದಾರೆ.
ಯೋಜನೆ ಮುಂದುವರೆಯುತ್ತಿರುವ ಹಿನ್ನೆಲೆಯಲ್ಲಿ ಯಲ್ಲಾಪುರ ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ವಿವಿಧ ಊಹಾಪೋಹಗಳು ಸೃಷ್ಟಿ ಆಗತೊಡಗಿದೆ.
ಜನಪ್ರತಿನಿಧಿಗಳಿಗೆ ಅಧಿಕಾರದ ದಾಹ….!?
ಜಿಲ್ಲೆಯ ಜನಪ್ರತಿನಿಧಿಗಳು ಜನ ವಿರೋಧಿ ಯೋಜನೆಯ ವಿರುದ್ಧ ತಮ್ಮ ಧ್ವನಿ ಎತ್ತಲು ರಾಜೀನಾಮೆಯ ಹೇಳಿಕೆ ನೀಡುವುದು ಹಾಗಿರಲಿ…. ತಮಗೆ ಸಂಬಂಧವೇ ಇಲ್ಲದಂತೆ ಓಡಾಡಿಕೊಂಡು ಇರುವಂತೆ ಕಂಡು ಬರುತ್ತಿದೆ ಎಂಬುದು ಹಲವರ ಆರೋಪವಾಗಿದೆ.
ನಮ್ಮ ಜಿಲ್ಲೆಯ ಪರಿಸರ ಹಾಗೂ ಜನರ ಒಳಿತಿಗಾಗಿ ಜಿಲ್ಲೆಯ ಜನಪ್ರತಿನಿಧಿಗಳು ಏನು ಮಾಡಿದರು…? ಎಂಬ ಪ್ರಶ್ನೆಗೆ ಯಾರಿಂದಲೂ ಉತ್ತರವಿಲ್ಲ. ಹಾಗಿದ್ದರೆ ಹೋರಾಟದ ಹೆಸರಿನಲ್ಲಿ ಕೆಲವರು ತಮ್ಮ ಬೇಳೆ ಬೇಯಿಸಿಕೊಂಡು ಪ್ರಚಾರಗಿಟ್ಟಿಸಿಕೊಂಡರೆ…? ಎಂಬ ಪ್ರಶ್ನೆ ಕೂಡ ಮೂಡುವಂತಾಗಿದೆ.
ಜಿಲ್ಲೆಯ ಜನತೆ ಸದ್ಯ ತೀವ್ರ ಆತಂಕದಲ್ಲಿರುವ ಸಂದರ್ಭವನ್ನು ಕೆಲವರು ತಮ್ಮ ಸ್ವಾರ್ಥಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆಯೇ….? ಎಂಬುದು ಕೂಡ ಪ್ರಶ್ನೆಯಾಗಿದೆ.
