Banner Ad

ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನ ಇಡಗುಂದಿ ಸಮೀಪದ ಬಾಳೆಜಡ್ಡಿಯ ಶಶಾಂಕ ನಾಗೇಂದ್ರ ಭಟ್ಟ ಅವರು ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ. 26 ವರ್ಷದ ಶಶಾಂಕ ಅವರು ನ್ಯಾಯಾಧೀಶ ಹುದ್ದೆಗೇರಿದ ತಾಲೂಕಿನ ಅತಿ ಕಿರಿಯರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಇಡಗುಂದಿ ಸಮೀಪದ ಬಾಳೆಜಡ್ಡಿಯವರಾದರ ಶಶಾಂಕ ಅವರು, ಲಲಿತಾ ಹಾಗೂ ಶಿವರಂಜಿನಿ ನಾಗೇಂದ್ರ ಭಟ್ಟ ದಂಪತಿಯ ಪುತ್ರ. ಚಿಕ್ಕಮಾವಳ್ಳಿ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪೂರೈಸಿ, ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡಿದ್ದಾರೆ. ಎಸ್.
ಎಸ್.ಎಲ್‌ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಸಾಧನೆಯನ್ನು ಮಾಡಿದ್ದಾರೆ.

Banner Ad

ಹುಬ್ಬಳ್ಳಿಯಲ್ಲಿ ಬಿಎ ಹಾಗೂ ಕಾನೂನು ಪದವಿ ಗಳಿಸಿದ ನಂತರ, ಬೆಂಗಳೂರಿನಲ್ಲಿ ಭಾಗ್ವತ ಅಸೋಸಿಯೇಟ್ನಲ್ಲಿ ಹಿರಿಯ ವಕೀಲರ ಮಾರ್ಗದರ್ಶನದಲ್ಲಿ 3 ವರ್ಷಗಳ ಕಾಲಾ ವಕಾಲತ್ತಿನ ಅನುಭವವನ್ನೂ ತಮ್ಮದಾಗಿಸಿಕೊಂಡಿದ್ದಾರೆ.
ಕಳೆದ ತಿಂಗಳು ನಡೆದ ಸಿವಿಲ್ ನ್ಯಾಯಾಧೀಶ ಹುದ್ದೆಯ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಮೂಲಕ ಕಿರಿಯು ವಯಸ್ಸಿನಲ್ಲೇ ನ್ಯಾಯಾಧೀಶ ಹುದ್ದೆಗೇರಿದ ಸಾಧನೆ ಮಾಡಿದ್ದಾರೆ.

Banner Ad