ಸುದ್ದಿ ಕನ್ನಡ ವಾರ್ತೆ
ದಕ್ಷಿಣ ಭಾರತದಲ್ಲಿ ಅರ್ನಾಬ್ ಚಂಡಮಾರುತದ ಅಬ್ಬರ ಆರಂಭಗೊಂಡಿದೆ . ಅಕ್ಟೋಬರ್ 28ಕ್ಕೆ ಆಂಧ್ರಪ್ರದೇಶ ಕರಾವಳಿಗೆ ಮತ್ತು ಓಡಿಸ್ಸಾ ಕರಾವಳಿಗೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

1999 ರ ಅಕ್ಟೋಬರ್ 29ರಂದು ಒಡಿಸ್ಸಾ ಕರಾವಳಿಗೆ 250 ಕಿಲೋ ಮೀಟರ್ ಗಳಿಗಿಂತಲೂ ಹೆಚ್ಚು ವೇಗದಲ್ಲಿ ಚಂಡಮಾರುತ ಅಪ್ಪಳಿಸಿತ್ತು. ಈ ಪ್ರಕೃತಿ ವಿಕೋಪದಲ್ಲಿ 10,000ಕ್ಕೂ ಹೆಚ್ಚು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ಇದೀಗ ಎರಡು ದಶಕಗಳ ಬಳಿಕವೂ ಮತ್ತೆ ಚಂಡಮಾರುತ ಅಪ್ಪಳಿಸಲಿದೆ. ವಿಪತ್ತು ನಿರ್ವಹಣಾ ತಂಡ ಮುನ್ನೆಚ್ಚರಿಕೆ ಕಾರ್ಯಕ್ರಮ ಕೈಗೊಂಡಿದ್ದು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಸದ್ಯ ಇನ್ನೆರಡು ದಿನಗಳಲ್ಲಿ ಅರ್ನಾಬ್ ಚಂಡಮಾರುತ ಭೂಮಿಗೆ ಅಪ್ಪಳಿಸಲಿದೆ. ಓಡಿಸ್ಸಾ, ಆಂಧ್ರಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ತೆಲಂಗಾಣದಲ್ಲಿಯೂ ಚಂಡಮಾರುತ ಆರ್ಭಟಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇತರ ರಾಜ್ಯಗಳಲ್ಲಿಯೂ ಈ ಪ್ರವಾಹ ನಿರ್ವಹಣಾ ವ್ಯವಸ್ಥೆ ಬದಲಾಯಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

Banner Ad