ಸುದ್ದಿ ಕನ್ನಡ ವಾರ್ತೆ

ಜೊಯಿಡಾ :  ಸಪ್ತ ಸ್ವರಸಂಸ್ಥೆಯವರು ಯರಮುಖ ದಲ್ಲಿ ನಡೆಸುತ್ತಿರುವ ಯಕ್ಷಗಾನ ಸಪ್ತಾಹದ 6ನೇ ದಿನದ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ, ವಿದ್ಯುತ್ ನಿಗಮದ ನಿವೃತ್ತ ಶಿಕ್ಶಕ ವಿನಾಯಕ ಗಾಂವ್ಕರ ನಡೆಸಿಕೊಟ್ಟರು

ಈ ಸಂದರ್ಭದಲ್ಲಿ ಮಾತನಾಡಿದ ಅವರು,ಸಂಸ್ಥೆಯವರು ಇಲ್ಲಿ ಯಕ್ಷ ಲೋಕವನ್ನೇ ನಿರ್ಮಿಸಿದ್ದಾರೆ ಕಳೆದ 6 ದಿನ ಗಳಿಂದ ಜನರು ಯಕ್ಷಗಾನ ನೋಡಲು ಬರುತ್ತಿರುವುದು ಸಂಸ್ಥೆಗೆ ಬೆಂಬಲ ನೀಡುತ್ತಿರುವುದು ಸಂಸ್ಥೆಯ ಕಾರ್ಯ ವೈಖರಿಗೆ ಸಾಕ್ಷಿ ಯಾಗಿದೆ. ಹಿಂದೆ ಯಕ್ಷರು, ಗಂಧರ್ವರು ತಮ್ಮ, ತಮ್ಮ, ಲೋಕವನ್ನು ನಿರ್ಮಿಸಿ ಕೊಂಡಿದ್ದರಂತೆ, ಹಾಗೇ ಇಲ್ಲಿನ ಯಕ್ಷ ಲೋಕ ದಲ್ಲಿ ಊರಿನ ಜನತೆ ಇದ್ದಾರೆ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಸಪ್ತ ಸ್ವರ ಸಂಸ್ಥೆ ಮುಂದಿನ ದಿನಗಳಲ್ಲಿ ಧಾಂಡಿಯ ಕೂಡ ನಡೆಸಲಿ ಎಂದರು ಈ ಸಂದರ್ಭದಲ್ಲಿ ನಾಟಿ ಔಷದಿ ನೀಡುವ ಮತ್ತು ಬಾಣಂತಿ, ಮಕ್ಕಳ ಆರೈಕೆ ಮಾಡುತ್ತಿರುವ ಅನುಸೂಯ ಸಿದ್ದಿ ಅವರನ್ನು ಸನ್ಮಾನಿಸ ಲಾಯಿತು.

ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸ್ವರ್ಣ ವಲ್ಲಿ ಮಠದ ಗುಂದಸೀಮೆಯ ಮಾತೃ ಮಂಡಳಿ ಅಧ್ಯಕ್ಷೆ ಶ್ರೀಮತಿ ಪದ್ಮಶ್ರೀ ಪ್ರಸನ್ನ ಭಟ್ ಅವರುಮಾತನಾಡಿ, ಪುಟ್ಟ ಪುಟ್ಟ ಹೆಜ್ಜೆ ಇಡುವ ಮಕ್ಕಳು ಸಮಾಜದಲ್ಲಿ ಉತ್ತಮ ವ್ಯಕ್ತಿ ಗಳಾಗಲಿ ಎಂಬ ಉದ್ದೇಶ ದಿಂದ ಅವರಿಗೆ ಉತ್ತಮ ಸಂಸ್ಕಾರ ಇಲ್ಲಿ ನೀಡಲಾಗುತ್ತಿದೆ ಇದು ಪಾಲಕರಿಗೆ ತುಂಬಾ ಹೆಮ್ಮೆಯ ವಿಷಯ ಸಂಸ್ಥೆಯ ಕಾರ್ಯಕ್ಕೆ ನೆರವಾಗಿ ಅಮರಾ ಹೋಮ್ ಸ್ಟೇ ಯ ಆರ್ ಎನ್ ಹೆಗಡೆ ಕುಟುಂಬ ಸಹಕರಿಸುತ್ತಿರುವುದು ಕೂಡ ಹೆಮ್ಮೆಯ ವಿಷಯ ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸಲೇ ಬೇಕು ಎಂದು, ಹಾಲು ಸಂಸ್ಕರಿಸಿದಾಗ ಹೇಗೆ ಮೊಸರು ಬೆಣ್ಣೆ ತುಪ್ಪ ವಾಗಿ ಉತ್ತಮ ಫಲ ಸಿಗುವುದೋ ಹಾಗೇ ಮಕ್ಕಳು ಈಗಿನಿಂದಲೇ ಸಂಸ್ಕಾರ ಪಡೆದು ಉತ್ತಮ ರಾಗಲಿ ಎಂಬ ಉದ್ದೇಶ ಸಂಸ್ಥೆಯ ದಾಗಿದೆ ಎಂದರು.

 

ವೇದಿಕೆಯಲ್ಲಿ ವಿಶ್ವೇಶ್ವರ ಹೆಗಡೆ,ನರಶಿಂಹ ಬಾಸ್ಕರ್ ಭಟ್, ಗಜಾನನ ಭಾಗ್ವತ, ಅಧ್ಯಕ್ಷೆ ಸುಮಂಗಲಾ ದೇಸಾಯಿ, ಇತರರು ಇದ್ದರು.ಕಾರ್ಯಕ್ರಮ ವನ್ನು ಮಹಿಮಾ ಭಾಗ್ವತ, ಗಾಯತ್ರಿ ಹೆಗಡೆ ನಡೆಸಿ ಕೊಟ್ಟರು.ಸಂಸ್ಥೆಯ 23ನೇ ವರ್ಷ ದಲ್ಲಿ ನಡೆಯುತ್ತಿರುವ 11ನೇ ವರ್ಷ ದ ಯಕ್ಷಗಾನ ಸಪ್ತಾಹ 6ನೇ ದಿನ ನಡೆದ ಕಾರ್ಯಕ್ರಮ ದಲ್ಲಿ ಪುಟ್ಟ ಮಕ್ಕಳು ನಡೆಸಿಕೊಟ್ಟ ಯಕ್ಷಗಾನ ವೀರ ವೃಷ ಸೇನ ಸೇರಿದ ಜನರಿಗೆ ತುಂಬಾ ಮನರಂಜನೆ ನೀಡಿತು.