Banner Ad

ಸುದ್ದಿ ಕನ್ನಡ ವಾರ್ತೆ

ಶ್ರೀ ಕ್ಷೆತ್ರ ಧರ್ಮಸ್ಥಳ ಯೋಜನಾ ಕಚೇರಿ ವ್ಯಾಪ್ತಿಯ ಜೋಯಿಡಾ ವಲಯದ ಜೋಯಿಡಾ ಕಾರ್ಯಕ್ಷೆತ್ರದಲ್ಲಿ ಪರಮಪೂಜ್ಯ ಡಾಕ್ಟರ್ ವೀರೇಂದ್ರ ಹೆಗ್ಗಡೆಯವರು ಜಲಮಂಗಲ ಕಾರ್ಯಕ್ರಮದ ಅಡಿಯಲ್ಲಿ ಮಂಜೂರು ಮಾಡಿದ ವಾಟರ್ ಬೆಡ್ಡನ್ನು ವಿತರಿಸಲಾಯಿತು.

Banner Ad

 

ತಾಲೂಕಿನ ನಗರ ಭಾವಿಯ ಪಲಾನುಭವಿ ಭುವನೇಶ್ವರ್ ಮಹೇಶ್ ಮಿರಾಶಿ ಈತನಿಗೆ 11ವರ್ಷ, ಕಳೆದ 11 ವರ್ಷ ಗಳಿಂದ ಈತ ಹಾಸಿಗೆ ಯಲ್ಲೇ ಇದ್ದು ರೋಗಬಾದಿತ ನಾಗಿದ್ದಾನೆ ಈತನಿಗೆ ಧರ್ಮಸ್ಥಳ ಅಭಿವೃದ್ಧಿ ಸಂಸ್ಥೆಯಿಂದ ವಾಟರ್ ಬೆಡ್ಡ ವಿತರಣೆ ಮಾಡಲಾಯಿತು ಈ ಬಗ್ಗೆ ಕ್ಷೆತ್ರದ ಕಚೇರಿಗೆ ಅಗತ್ಯ ಮಾಹಿತಿ ಪೂರೈಸಲಾಗಿತ್ತು, ಇದನ್ನು ಪರಿಶೀಲಿಸಿದ ಖಾವಂದರು ರೋಗ ಪೀಡಿತ ಮಗುವಿಗೆ ವಾಟರ್ ಬೆಡ್ಡ ಪೂರೈಸಿ, ಮಾನವೀಯತೆ ತೋರಿಸಿದ್ದರು.

 

ಈ ಸಂದರ್ಭದಲ್ಲಿ ಕ್ಷೇತ್ರ ಯೋಜನಾಧಿಕಾರಿ ಗಳಾದ ಬೋಜ ಸರ್ ಹಾಗೂ ವಲಯ ಮೇಲ್ವಿಚಾರಕರಾದ ಸಿದ್ದಣ್ಣ ಕಟ್ಟಿಕರ್,ಮತ್ತು ಸೇವಾ ಪ್ರತಿನಿಧಿ ಸಂದೀಪ್ ಪಿ,ಗಾವುಡಾ ಒಕ್ಕೂಟದ ಪದಾಧಿಕಾರಿಗಳು ಕಾರ್ಯಕ್ಷೇತ್ರದ ಸೇವಾ ಪ್ರತಿನಿಧಿಯಾದ ಶ್ರೀಮತಿ ದ್ರಾಕ್ಷಾಯಿಣಿ R ನಾಯ್ಕ್ ಹಾಗೂ ಸಂಘ ಸದಸ್ಯರು ಇದ್ದರು

Banner Ad