ಸುದ್ಧಿಕನ್ನಡ ವಾರ್ತೆ
ಪಣಜಿ: ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ನವೆಂಬರ್ 3 ರಂದು ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ವಿರೋಧಿಸಿ ಹಮ್ಮಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ ತಡೆ ಹೋರಾಟವು ಸಂಪೂರ್ಣ ಶಾಂತಿಯುತವಾಗಿರಬೇಕು ಮತ್ತು ಹೋರಾಟದ ಧ್ವನಿ ಗಟ್ಟಿಯಾಗ ಮೊಳಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಪೀಠಾಧಿಪತಿಗಳಾದ ಶ್ರೀಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದ್ದಾರೆ.
ಸ್ವರ್ಣವಲ್ಲೀ ಮಠದಲ್ಲಿ ಆಯೋಜಿಸಿದ್ದ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿ ಹಾಗೂ ಹೆದ್ದಾರಿ ತಡೆ ಸಂಚಾಲನಾ ಸಮೀತಿಯ ಪ್ರಮುಖರ ಸಭೆಯಲ್ಲಿ ಶ್ರೀಗಳು ಪ್ರಮುಖ ಸೂಚನೆ ನೀಡಿದರು. ಈ ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶವಿಲ್ಲದಂತೆ ಈ ಹೋರಾಟವನ್ನು ಯಶಸ್ವಿಗೊಳಿಸುವಂತೆ ಶ್ರೀಗಳು ಸೂಚಿಸಿದರು.
ಕಾನೂನು ಚೌಕಟ್ಟಿನಲ್ಲಿಯೇ ಹೋರಾಟ ರೂಪಿಸಿ ಸರ್ಕಾರದ ಗಮನ ಸೆಳೆಯುವಂತಾಗಬೇಕು. ನದಿ ಜೋಡಣೆ ಯೋಜನೆ ತೀವ್ರತೆಯ ಬಗ್ಗ ಮನವರಿಕೆ ಮಾಡಲು ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಅವಕಾಶ ಕಲ್ಪಿಸಬೇಕು. ಗಂಗಾಷ್ಠಮಿಯಿಂದ ಒಂದು ವಾರದ ವರೆಗೆ ಸಾಧ್ಯವಿರುವ ಎಲ್ಲೆಡೆ ಗಂಗಾರತಿ ಹಾಗೂ ನದಿ ಪೂಜೆ ಹಮ್ಮಿಕೊಳ್ಳುವ ಮೂಲಕ ಜನಜಾಗೃತ ಮೂಡಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ ಶ್ರೀಗಳು ನುಡಿದರು,
ಈ ಸಭೆಯಲ್ಲಿ ಸತೀಶ್ ಹೆಗಡೆ ಹುಳಗೋಳ, ಅನಂತ ಹೆಗಡೆ ಅಶೀಸರ, ಎನ್ ಕೆ ಭಟ್ ಅಗ್ಗಾಶಿಕುಂಬ್ರಿ, ಹರಿಪ್ರಕಾಶ ಕೋಣೆಮನೆ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.
