Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ ತಾಲೂಕಿನ ಹದಿನಾರು ಗ್ರಾಮ ಪಂಚಾಯತಗಳ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಗಳ ಕಾಲ ನಡೆಸಿದ ಶ್ರಮದಾನ ದಿಂದ ಈಗ ಸ್ವಚ್ಛ ಜೋಯಿಡಾ ನಿರ್ಮಾಣ ವಾಗಿದೆ.

Banner Ad

ಈ ಶ್ರಮದಾನ ಇಲ್ಲಿಗೆ ನಿಲ್ಲದೇ ನಿರಂತರ ವಾಗಿದ್ದು ಸದಾ ಕಾಲ ಸ್ವಚ್ಚ ಜೋಯಿಡಾ ಕಂಡು ಬರಲಿ ಎಂದು ಜನತೆ ಶಾಸಕರನ್ನು ಅಭಿನಂದಿಸಿದ್ದಾರೆ. ಶಾಸಕರು ಮತ್ತು ಆಡಳಿತ ಸುಧಾರಣಾ ಸಮೀತಿ ಅಧ್ಯಕ್ಷರು ಆಗಿರುವ ಆರ್ ವಿ ದೇಶಪಾಂಡೆ ಅವರು ತಮ್ಮ ಕ್ಷೆತ್ರ ಸ್ವಚ್ಚ ವಾಗಿರಬೇಕು ಜನತೆಯ ಆರೋಗ್ಯ ಚನ್ನಾಗಿರಬೇಕು ಎಂಬ ಕನಸನ್ನು ಕಂಡಿದ್ದರು. ಅದರಂತೆ ವಿವಿಧ ಸಂಘ ಸಂಸ್ಥೆ ಗಳೊಂದಿಗೆ ಚರ್ಚಿಸಿ ಕಾರ್ಯಕ್ರಮ ವನ್ನು ಅಧಿಕಾರಿಗಳ ಸಹಕಾರದಲ್ಲಿ ಸಂಘಟಿಸಿದ್ದರು. ಇದು ಅತ್ಯಂತ ಪರಿಪೂರ್ಣ ವಾಗಿ ನಡೆಯಿತು. ಸ್ವಚ್ಛತೆ ನಿರ್ವಹಿಸಲು ಪ್ರತಿಯೊಂದು ಪಂಚಾಯತಕ್ಕೂ ಆರ್ಥಿಕ ನೆರವನ್ನು ಸಂಘ ಸಂಸ್ಥೆ ಗಳ ನೆರವಿನಲ್ಲಿ ನೀಡಿದರು. ಇದು ಜನತೆಯ ಉತ್ಸಾಹ ಹೆಚ್ಚಲು ಕಾರಣ ವಾಯಿತು ತಾಲೂಕಿನ ತಹಸೀಲ್ದಾರ ಮಂಜುನಾಥ ಮುನ್ನೊಳ್ಳಿ ತಾಲೂಕು ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಭಾರಥಿ ಎಂ, ಅವರು. ಎಲ್ಲ ಗ್ರಾಮ ಪಂಚಾಯತ ದ ಅಭಿವೃದ್ದಿ ಅಧಿಕಾರಿ ಗಳ ನೆರವಿನಿಂದ ತಾಲೂಕಿನ ಹದಿನಾರು ಗ್ರಾಮ ಪಂಚಾಯತ ಗಳ ಹಳ್ಳಿ ಹಳ್ಳಿ ಗಳಲ್ಲಿ ಸ್ವಚ್ಛತಾ ಕಾರ್ಯ ನಡೆಯುವಂತೆ ನೋಡಿಕೊಂಡರು, ಪಕ್ಷ ಭೇದ ಮರೆತು ಜನರು ಸಹಕಾರ ನೀಡಿದರು, ಇದು ಜನರ ಆರೋಗ್ಯದ ವಿಚಾರ, ಯಾವುದೇ ಪಕ್ಷ ಅಥವಾ ನಿರ್ದಿಷ್ಟ ಜನರಿಗೆ ಮಾತ್ರ ಸಿಗುವಂತದ್ದಲ್ಲ, ಎಲ್ಲರೂ ಆರೋಗ್ಯ ವಂತರಾಗಿ ರಲು, ಸ್ವಚ್ಛತೆ ಬೇಕೇ ಬೇಕು ಎಂಬ ಕಾರಣಕ್ಕೆ ಶಾಸಕರು ಈ ಕ್ರಮ ಕೈಕೊಂಡಿದ್ದಾರೆ. ಎಂಬ ಕಲ್ಪನೆ ಜನತೆಯಲ್ಲಿ ಕಂಡು ಬಂದಿದೆ ಈಕಾರ್ಯ ದಲ್ಲಿ ತಾಲೂಕಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ಮಹಿಳಾ ಕಾಂಗ್ರೆಸ್ ಪಕ್ಷದ ಪದಾಧಿಕಾರಿಗಳು ವಿಶೇಷ ಆಸಕ್ತಿ ಯಿಂದ ಮೂರು ದಿನಗಳ ಕಾಲ ತಮ್ಮ ತಮ್ಮ ಸಹೋದ್ಯೋಗಿ ಗಳೊಂದಿಗೆ ಸ್ವಚ್ಛತಾ ಕೆಲಸ ದಲ್ಲಿ ನಿರತರಾಗಿದ್ದು, ಮುಂದಿನ ದಿನಗಳಲ್ಲಿ ಈ ಕೆಲಸ ವನ್ನು ಜನತೆ ಮುಂದುವರಿಸಿಕೊಂಡು ಹೋದಲ್ಲಿ ಶಾಸಕರ ಪ್ರಯತ್ನ ಕ್ಕೆ ನಿಜವಾದ ಮನ್ನಣೆ ಯನ್ನು ನೀಡಿದಂತೆ ಆಗುವದು.

Banner Ad