Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ರಾಮನಗರ ಜಿಲ್ಲಾ ಪಂಚಾಯತ ವ್ಯಾಪ್ತಿಯ ರಾಮನಗರದ ಮಾರುತಿ ದೇವಸ್ಥಾನ,ಸೂಪಾ ರೋಡ್ ಹನುಮಾನಗಲ್ಲಿಯ ಶ್ರೀ ಹನುಮಾನ ದೇವಸ್ಥಾನ ಸೇರಿದಂತೆ ಇನ್ನೂ ಅನೇಕ ಕಡೆ,ಜೋಯಿಡಾ ಜಿಲ್ಲಾ ಪಂಚಾಯತ ವ್ಯಾಪ್ತಿಯ ಜೋಯಿಡಾ ಕೇಂದ್ರ ಸ್ಥಾನದ ಶ್ರೀ ಹನುಮಾನ ಮಂದಿರ, ವಿರ್ನೋಲಿಯ ಶ್ರೀ ಮಾರುತಿ ದೇವಸ್ಥಾನ,ನಂದಿಗದ್ದೆಯ ವನ್ಯ ಮಾರುತಿ ದೇವಸ್ಥಾನ ಸೇರಿದಂತೆ ಇನ್ನಿತರ ಕಡೆಯ ಶ್ರೀ ಹನುಮಾನ ದೇವಸ್ಥಾನಗಳಲ್ಲಿ ಮುಂಜಾನೆಯ ವೇಳೆ ತೊಟ್ಟಿಲು ಪೂಜೆ,ಮಧ್ಯಾಹ್ನ ಶ್ರೀ ದೇವರ ಮಹಾಅಭಿಷೇಕ,ಶ್ರೀ ಸತ್ಯನಾರಾಯಣ ದೇವರ ಪೂಜಾ ಕಾರ್ಯಕ್ರಮ,ತೀರ್ಥ ಪ್ರಸಾದ ವಿತರಣೆ.ಮಧ್ಯಾಹ್ನ ಮಹಾಪ್ರಸಾದ (ಅನ್ನಸಂತರ್ಪಣೆ) ಕಾರ್ಯಕ್ರಮ ನಡೆಯಿತು.

Banner Ad

ಸಂಜೆಯ ವೇಳೆ ಭಜನಾ ಕಾರ್ಯಕ್ರಮ,ಮಕ್ಕಳ ಮನರಂಜನಾ ಕಾರ್ಯಕ್ರಮ,ಶ್ರೀ ದೇವರ ಫಲಾವಳಿಗಳ ಸವಾಲ್ ಕಾರ್ಯಕ್ರಮ,ಭಕ್ತರ ವಿಶೇಷ ಮನರಂಜನೆಗಾಗಿ ಮರಾಠಿ,ಕನ್ನಡ ನಾಟಕದ,ಆರ್ಕೆಸ್ಟ್ರಾದ ಪ್ರದರ್ಶನ ನಡೆಯಲಿದೆ. ಬೆಳಿಗ್ಗೆಯಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಗಳಲ್ಲಿ ಹಣ್ಣು,ಕಾಯಿ, ಹೂವಿನೊಂದಿಗೆ ಉಪಸ್ಥಿತರಿದ್ದು ಶ್ರೀ ದೇವರಲ್ಲಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿಭಾವದಿಂದ ಪ್ರಾರ್ಥಿಸಿದರು.ಒಟ್ಟಿನಲ್ಲಿ ಜೋಯಿಡಾ ತಾಲೂಕಿನಾದ್ಯಂತ ಶ್ರೀ ಹನುಮಾನ ಜನ್ಮೋತ್ಸವದ ಸಂಭ್ರಮದ ವಾತಾವರಣ ಮನೆಮಾಡಿದೆ.

Banner Ad