ಸುದ್ದಿ ಕನ್ನಡ ವಾರ್ತೆ
ಜೋಯಿಡಾ ದ ಗಣಪತಿ ಮಂಜುನಾಥ ಹೆಗಡೆ ಇವರು ಮಾಡಿದ ಸಾಧನೆಗೆ ಬೆಂಗಳೂರಿನ ಸಂಸ್ಕೃತ ವಿಶ್ವ ವಿದ್ಯಾಲಯ ಪುರಸ್ಕಾರ ನೀಡಿ ಗೌರವಿಸಿದೆ ಬೆಂಗಳೂರಿನ ವೇದಾಗಮ ಸಂಸ್ಕೃತ ವಿಶ್ವ ವಿದ್ಯಾಲಯ ದಲ್ಲಿ ಅಭ್ಯಾಸ ಮಾಡುತ್ತಿರುವ ಜೋಯಿಡಾ ತಾಲೂಕಿನ ಗುಂದ ಹಲಸ್ಖಂಡ ದ ಮಂಜುನಾಥ ಮತ್ತು ವಾಣಿ ದಂಪತಿಗಳ ಪುತ್ರ ಮಂಜುನಾಥ ಹೆಗಡೆ ಅವರು ಕೃಷ್ಣ ಯಜುರ್ವೇದ ದಲ್ಲಿ ಅತ್ಯಧಿಕ ಅಂಕ ಪಡೆದು (ಎಂ ಎ )ಮಾಡಿದ ಸಾಧನೆಗೆ ಗೌರವಿಸಲಾಗಿದೆ ಬೆಂಗಳೂರಿನ ಸಂಸ್ಕೃತ ವಿಶ್ವ ವಿದ್ಯಾಲಯದ 13ನೇ ದೀಕ್ಷಾoತ ಘಟಿಕೋತ್ಸವದ ಸಂದರ್ಭದಲ್ಲಿ ಜ್ಞಾನ ಜ್ಯೋತಿ ಸಭಾಂಗಣ ದಲ್ಲಿ ನಡೆದ ಸಮಾರಂಭ ದಲ್ಲಿ ಕರ್ನಾಟಕ ರಾಜ್ಯ, ರಾಜ್ಯಪಾಲಕರು ಮತ್ತು ವಿಶ್ವ ವಿದ್ಯಾಲಯ ದ ಕುಲ ಸಚಿವರೂ ಆದ ಥಾವರ ಚಂದ ಗೆಹಲೊಟ್ ಅವರು ಪುರಸ್ಕಾರ ಪ್ರದಾನ ಮಾಡಿದರು.
ಇದರೊಂದಿಗೆ ಇನ್ನಪೋಸಿಸ್ ದತ್ತಿ ನಿಧಿ ನಗದು ಪುರಸ್ಕಾರವೂ ಮಂಜುನಾಥ ಹೆಗಡೆಗೆ ದೊರಕಿದೆ. ಸಾಧನೆ ಮಾಡಿದರೆ ಪುರಸ್ಕಾರ ನಿಶ್ಚಿತ ಎನ್ನುವುದನ್ನು ನಮ್ಮ ಜಿಲ್ಲೆಯ ಮಂಜುನಾಥ ಮಾಡಿ ತೋರಿಸಿರುವದು ಜಿಲ್ಲೆಗೆ ಹೆಮ್ಮೆಯ ವಿಷಯ ವಾಗಿದೆ.
