Banner Ad

ಸುದ್ದಿ ಕನ್ನಡ ವಾರ್ತೆ
​ಯಲ್ಲಾಪುರ: ತಾಲೂಕಿನ ಕಣ್ಣಿಗೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಚಿಕ್ಕಮಾವಳ್ಳಿಯ ಅಡಿಕೆ ತೋಟದಲ್ಲಿ ಹೆಬ್ಬಾವು ಕಾಣಿಸಿಕೊಂಡು ಆತಂಕ ಮೂಡಿಸಿತು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ, ಸ್ಥಳೀಯರ ಸಹಕಾರದೊಂದಿಗೆ ಹಾವನ್ನು ರಕ್ಷಿಸಿ ಕಾಡಿಗೆ ಬಿಟ್ಟರು.

Banner Ad

​ಸುಮಾರು 11.5 ಅಡಿ ಉದ್ದ, 22 ಕೆಜಿ ತೂಕದ ಈ ಹಾವನ್ನು ಉರಗ ರಕ್ಷಕರಾದ ರಮೇಶ ಬಡಿಗೇರ, ಲಕ್ಷ್ಮಣ ಪರ್ಮಾರ, ಪಾಂಡುರಂಗ ಮಾಪ್ಸೇಕರ ರಕ್ಷಿಸಿ ಕಾಡಿಗೆ ಬಿಟ್ಟರು. ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಗರಬಗುಡಿ, ಗ್ರಾಮಸ್ಥರಾದ ವಿಘ್ನೇಶ್ವರ ಹೆಗಡೆ, ಮಹಾಬಲೇಶ್ವರ ಹೆಗಡೆ, ಶೇಷಗಿರಿ ಹೆಗಡೆ, ಗಣಪತಿ ಹೆಗಡೆ, ಕುಮಾರ ಮುರಾರಿ, ನಾಗರಾಜ ಹೆಗಡೆ, ತರುಣ ಹೆಗಡೆ ಇತರರು ಸಹಕರಿಸಿದರು.

Banner Ad