Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ‌ ಮಾರಿಕಾಂಬಾ ದೇವಿ ಜಾತ್ರೆಯ ಬಳಿಕ
ಶ್ರೀದೇವಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದಂದು ದೇವರ ಪುನಃ ಪ್ರತಿಷ್ಠೆ ಭಕ್ತಿಭಾವದಿಂದ ನೆರವೇರಿತು.
ಇಂದು ಬೆಳಿಗ್ಗೆ ೭.೫೮ರ ಶುಭ ಮುಹೂರ್ತದಲ್ಲಿ ದೇವಿಯ ಪ್ರತಿಷ್ಠೆ ವಿಧಿವಿಧಾನಗಳೊಂದಿಗೆ ನೆರವೇರಿಸಲಾಯಿತು. ನಂತರ ಬೆಳಿಗ್ಗೆ ೯.೩೦ರಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದ್ದು, ದೇವಸ್ಥಾನದತ್ತ ಭಕ್ತರ ದಂಡೆ ಹರಿದುಬಂತು.
ಭಕ್ತರು ಉಡಿ ಹಾಗೂ ಹಣ್ಣುಕಾತಿ ಸೇವೆಗಳನ್ನು ಸಮರ್ಪಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು. ಮಧ್ಯಾಹ್ನ ಪ್ರಸಾದ ಭೋಜನ ಕೂಡ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದ ಸುತ್ತ ಒಂದು‌ ದಿನದ ಜಾತ್ರೆಯಂತೆ‌ ಭಾಸವಾಗುತ್ತಿತ್ತು.
.

Banner Ad
Banner Ad