Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಜೋಯಿಡಾ ಗ್ರಾಮ ಪಂಚಾಯತ ಕೇಂದ್ರ ಸ್ಥಳದಲ್ಲಿ ಶ್ರೀಮದ್ ಜಗದ್ಗುರು ರಾಮಾನಂದಚಾರ್ಯ ಶ್ರೀ ನರೇಂದ್ರಚಾರ್ಯಜೀ ಜಗದ್ಗುರು ರಾಮಾನಂದಚಾರ್ಯ ದಕ್ಷಿಣ ಪೀಠ ನಾಣೀಜಧಾಮ ಉತ್ತರಕನ್ನಡ ಪೂರ್ವ ಜೋಯಿಡಾ ಶ್ರೀ ನರೇಂದ್ರ ಮಹಾರಾಜ್ ರಾಮಾನಂದಚಾರ್ಯ ಸಂಪ್ರದಾಯದ ವತಿಯಿಂದ ಹಿಂದೂ ಹೊಸವರ್ಷ ಯುಗಾದಿ ಹಬ್ಬದ ಪ್ರಯುಕ್ತ ಹಿಂದೂ ಹೊಸವರ್ಷ ಸ್ವಾಗತ ಶೋಭಾಯಾತ್ರೆ ದಿನಾಂಕ:19-03-2026 ರ ಗುರುವಾರ ಬೆಳಗ್ಗೆ 7-00 ಗಂಟೆಯಿಂದ ಭವ್ಯವಾಗಿ ನಡೆಯಿತು.

Banner Ad

ಶೋಭಾಯಾತ್ರೆಯನ್ನು ಹಿಂದೂ ಧರ್ಮ,ಸಂಸ್ಕೃತಿ,ಪರಂಪರೆಯ ರಕ್ಷಣೆ ಉದ್ದೇಶದಿಂದ ಹಮ್ಮಿಕೊಂಡಿದ್ದ ಯಾತ್ರೆಯಲ್ಲಿ ಶ್ರೀ ನರೇಂದ್ರ ಮಹಾರಾಜ್ ಸಂಪ್ರದಾಯದ ಸದ್ಭಕ್ತರು ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ರಾಮಾಯಣ, ಮಹಾಭಾರತದ ವೇಷಭೂಷಣಗಳನ್ನೊಳಗೊಂಡ,ಕೇಸರಿ ಭಗವಾಧ್ವಜಯೊಂದಿಗೆ ಹಿರಿಯರ, ಮಾತೆಯರ,ಯುವಕರ,ಯುವತಿಯರ,ಮಕ್ಕಳ ಆಕರ್ಷಕ ಶೋಭಾಯಾತ್ರೆಯ ಭವ್ಯ ಮೆರವಣಿಗೆ ಎಲ್ಲರ ಮನ ಸೆಳೆಯಿತು.

Banner Ad