ಸುದ್ದಿ ಕನ್ನಡ
​ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ವಾಗೇಲಿ ಗ್ರಾಮದಿಂದ ಕರಂಜೋಯಿಡಾ ಮಾರ್ಗವಾಗಿ ಜೋಯಿಡಾಕ್ಕೆ ಇಂದು ಬೆಳಿಗ್ಗೆ ವಸತಿ ಬಸ್ ಬರುತ್ತಿದ್ದ ವೇಳೆ,ಕಾರ್ಟೋಳಿ ಸಮೀಪ ರಸ್ತೆ ಮಧ್ಯೆ ಮರ ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

​ಈ ಸಂದರ್ಭದಲ್ಲಿ ಬಸ್‌ನಲ್ಲಿದ್ದ ಪ್ರಯಾಣಿಕರು, ಶಾಲಾ ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಮರವನ್ನು ರಸ್ತೆ ಬದಿಗೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇವರ ಸಮಯಪ್ರಜ್ಞೆ ಮತ್ತು ಸಹಕಾರದಿಂದ ಬಸ್ ಸೇರಿದಂತೆ ಇತರೆ ವಾಹನಗಳು ಸುಗಮವಾಗಿ ಸಂಚರಿಸಲು ಸಾಧ್ಯವಾಯಿತು.
​ಸ್ಥಳೀಯರು ವಿದ್ಯಾರ್ಥಿಗಳ ಹಾಗೂ ಪ್ರಯಾಣಿಕರ ಸಾಮಾಜಿಕ ಕಳಕಳಿ ಮತ್ತು ಸಹಕಾರ ಮನೋಭಾವದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.