ಸುದ್ದಿ ಕನ್ನಡ ವಾರ್ತೆ

ಜೊಯಿಡಾ :ರಾಮಾಯಣ ಕಾವ್ಯದ ಮೂಲಕ ಆದರ್ಶ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶನ ನೀಡೀದ ಮಹಾನ್ ಚೇತನ. ವಾಲ್ಮೀಕಿ ಋಷಿ.ರಾಜನೀತಿ, ಕೌಟುಂಬಿಕ ಜೀವನ, ಜೋತೆಗೆ ಸಾಮಾಜಿಕ ಮೌಲ್ಯಗಳನ್ನು ಕಲಿಸುವ ರಾಮಾಯಣ ನಮಗೆಲ್ಲರಿಗೂ ಆದರ್ಶ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್. ಭಾರತಿ ಹೇಳಿದರು.

ಅವರು ತಾಲೂಕಾ ಆಡಳಿತ ಜೋಯಿಡಾ, ಸಮಾಜ ಕಲ್ಯಾಣ ಇಲಾಖೆ ಜೋಯಿಡಾ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ನಡೆದ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.


ವಾಲ್ಮೀಕಿ ಜಯಂತಿ ಸರ್ಕಾರ ಕಡ್ಡಾಯವಾಗಿ ಆಯೋಜಿಸಲು ಆದೇಶಿಸಿರುವುದು ಅಭಿನಂದನೀಯ. ಆದರೆ ಜೋಯಿಡಾ ತಾಲೂಕಿನಲ್ಲಿ ಜಯಂತಿಗೆ ಬಹುತೇಕ ಯಾವುದೇ ಇಲಾಖೆಯ ಅಧಿಕಾರಿಗಳು ಪಾಲ್ಗೂಳ್ಳದಿರುವುದು ವಿಷಾದನೀಯ. ತಾಲೂಕಿನ 16 ಗ್ರಾ.ಪಂ.ಗಳಲ್ಲಿ ವಾಲ್ಮೀಕಿ ಜಯಂತಿಗೆ ಅಭಿವೃದ್ಧಿ ಅಧಿಕಾರಿಗಳಾರೂ ಪಾಲ್ಗೂಳ್ಳದಿರುವುದು ಸರ್ಕಾರದ ಆದೇಶ ಧಿಕ್ಕರಿಸಿ ದಂತೆ ಇದನ್ನು ತಿವೃವಾಗಿ ಖಂಡಿಸುತ್ತೇನೆ. ಇಂದು ವಾಲ್ಮೀಕಿ ಜಯಂತಿಗೆ ಅಪವಾನಮಾಡಿದಂತೆ ಎಂದರು.

ಸಮಾಜ ಕಲ್ಯಾಣ ಅಧಿಕಾರಿ ವಾಸಂತಿ ಗೌಡ ಮಾತನಾಡಿ, ವಾಲ್ಮೀಕಿ ಭರತಖಂಡದ ವೈಭವ, ರಾಜನೀತಿ, ಆದರ್ಶ ಕೌಟುಂಬಿಕ ವ್ಯವಸ್ಥೆಯನ್ನು ಕಟ್ಟಿಕೊಟ್ಟ ಮಹಾಪುರುಷ. ಇವರ ಬದುಕು ನಮ್ಮ ಯುವ ಸಮೂಹಕ್ಕೆ ಪಾಠವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಉಪನ್ಯಾಸಕ ಶಿವಾಜಿ ಜೋಮನ್ನವರ, ವಾಲ್ಮೀಕಿ ರಾಮಾಯಣದ ಮೂಲಕ ಮನುಕುಲಕ್ಕೆ ಮಾನವಿಯ ಮೌಲ್ಯ, ಬದುಕಿನ ಆದರ್ಶವನ್ನು ಬೋಧಿಸಿದ ಸಂತ. ಸಾಮಾನ್ಯನೂ ದೇವಮಾನವನಾಗ ಬಲ್ಲ ಎನ್ನುವುದನ್ನು ಜಗತ್ತಿಗೆ ಸಾರಿದ ದಾರ್ಶನಿಕ ಎಂದರು.

ವೇದಿಕೆಯಲ್ಲಿ ಆರೋಗ್ಯಾಧಿಕಾರಿ ಗೀತಾ ನಾಯ್ಕ, ಶಿಕ್ಷಣ ಇಲಾಖೆಯ ಅಧಿಕಾರಿ ವಿಜಯಲಕ್ಷ್ಮಿ ಹಂಜಿ, ತೋಟಗಾರಿಕೆ ಇಲಾಖೆ ಅಧಿಕಾರಿ ಸಂತೋಷ ಎಕ್ಕೆಳ್ಳಿಕರ ಉಪಸ್ಥಿತರಿದ್ದರು. ಶಿಕ್ಷಕರಾದ ಯಶವಂತ ನಾಯ್ಕ ಅತ್ಯುತ್ತಮವಾಗಿ ನಿರೂಪಣೆ ಮಾಡಿ ಕಾರ್ಯಕ್ರಮಕ್ಕೆ ಶೋಭೆ ತಂದರು. ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಕಂಡುಬಂದಿತ್ತು.
ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ,ಹಾಗೂ ಯುವ ಸಂಸತ್ ನಲ್ಲಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ. ಪುರಸ್ಕರಿ ಗೌರವ ಸನ್ಮಾನ ಮಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.