Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ: ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಹಳಿಯಾಳ ವಿಸ್ತರಣಾ ಶಾಖೆ ಜೋಯಿಡಾ ವತಿಯಿಂದ *ಟಿಟಿಗಾಳಿ* ಗ್ರಾಮದಲ್ಲಿ ಎರಡು ದಿನಗಳ ಕಾಲ *ಜೇನು* *ಕೃಷಿ* *ತರಬೇತಿ* ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಊರಿನ ಹಿರಿಯರಾದ ಚಂದ್ರಕಾಂತ್ ಸುನಾರ್ ವಾಡ ಬಂದು ದೀಪ ಬೆಳಗಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು

Banner Ad

ಸಂಪನ್ಮೂಲ ವ್ಯಕ್ತಿಯಾದ ವೀರೇಶ್ ಧಾರವಾಡ ಇವರು ಜೇನು ಸಾಗಾಣಿಕೆ ಜೇನಿನ ವಿಧಗಳು , ಜೇನಿನಿಂದ ಆಗುವ ಲಾಭಗಳು , ಜೇನುತುಪ್ಪ ಮಾರುಕಟ್ಟೆ, ಮಾರಾಟ, ಜೇನಿನ ಸಂರಕ್ಷಣೆ ಹಾಗೂ ಜೇನಿ ನಿಂದಾಗುವ ಬೆಳೆಗಳ ಹೆಚ್ಚಿನ ಇಳುವರೇ ಕುರಿತು ತರಬೇತಿ ನೀಡಿದರು.

ಈ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ದಯಾನಂದ್ ನಾಯಕ್, ವಾಮನ್ ಗಾವಡಾ, ದೇವಿದಾಸ್ ಗಾವಾಡಾ ಉಪಸ್ಥಿತರಿದ್ದರು. ಸಂಸ್ಥೆಯ ಅಶೋಕ್ ಸೂರ್ಯವಂಶಿ ಯೋಜನಾಧಿಕಾರಿಗಳು ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ಸಂಸ್ಥೆ ಜೋಯಿಡಾ ಆಯೋಜಿಸಿ ವಂದಿಸಿದರು ಒಟ್ಟು 27 ಜನರು ಸ್ವ -ಸಹಾಯ ಸಂಘದ ಸದಸ್ಯರು ಟಿಟಿಗಾಳಿ, ಪಾತ್ರೆ , ಪಾರ್ಕರ್ ವಾಡ ಮತ್ತು ಪಾಂಜೇಲಿ ಹಳ್ಳಿಯವರು ಭಾಗವಹಿಸಿದ್ದರು.ಎರಡು ದಿನಗಳ ತರಬೇತಿ ಯಲ್ಲಿ ಒಂದು ದಿನ ಯಲ್ಲಾಪುರದ ಜೇನುಗೂಡು ಗಳನ್ನು ನೋಡುವ ಪ್ರವಾಸವೂ ಒಳಗೊಂಡಿತ್ತು.

Banner Ad