Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಅಸ್ಪೈರ್ ಸ್ಪೋರ್ಟ್ಸ್ ಹಾಗೂ ಕರಾಟೆ ಅಕಾಡೆಮಿಯ ವಿದ್ಯಾರ್ಥಿ ಜೋಯಿಡಾದ ಕುಮಾರ ಶಾಹೀಲ ಶ್ರೀಕಾಂತ ಹರಿಜನ ಈತನು ರಾಷ್ಟ್ರಮಟ್ಟದ ಕರಾಟೆ ಚಾಂಪಿಯನಶಿಪ್ ನಲ್ಲಿ ಕಟಾ ವಿಭಾಗದಲ್ಲಿ ಪ್ರಥಮ ಹಾಗೂ ಕುಮಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ.

Banner Ad

ಕಾರವಾರದಲ್ಲಿ ಆಯೋಜಿಸಿದ್ದ ಅಕ್ಟೋಬರ 11 ಭಾನುವಾರ 2 ನೇ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನಶಿಪ್ ನಲ್ಲಿ ಜೋಯಿಡಾದ ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಹರಿಜನ ಅವರ ಪುತ್ರರಾದ ಕುಮಾರ ಶಾಹೀಲ ಶ್ರೀಕಾಂತ ಹರಿಜನ ಈ ಸಾಧನೆ ಮಾಡಿರುತ್ತಾರೆ.

ಈತನ ಸಾಧನೆಗೆ ಜೋಯಿಡಾ ಕರಾಟೆ ತರಬೇತು ಸಂಸ್ಥೆಯ ಯಶಸ್ವಿ ತರಬೇತುದಾರರಾದ ರಾಜೇಶ ಗಾವಡೆಯವರು ತರಬೇತಿ, ಮಾರ್ಗದರ್ಶನ,ಪ್ರೋತ್ಸಾಹ,ಸಹಕಾರ ಉತ್ತಮ ಸಹಕಾರ ನೀಡಿರುತ್ತಾರೆ. ತರಬೇತು ಸಂಸ್ಥೆಯ ವಿದ್ಯಾರ್ಥಿಗಳು,ಗಣ್ಯರು,ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Banner Ad