Banner Ad

ಬ್ರಹ್ಮಚಾರಿಣಿ ದೇವಿಯು ನವರಾತ್ರಿಯ ಎರಡನೆಯ ದಿನ ಪೂಜಿಸುವ ನವದುರ್ಗೆಯರಲ್ಲಿ ಎರಡನೇ ಅವತಾರ. ಬ್ರಹ್ಮಚಾರಿಣಿ ದೇವಿಯು ನವದುರ್ಗೆಯರಲ್ಲಿ ಎರಡನೇ ಅವತಾರವಾಗಿದ್ದು,ನವರಾತ್ರಿಯ ಎರಡನೇ ದಿನದಂದು ಈಕೆಯನ್ನು ಅತ್ಯಂತ ಭಕ್ತಿಯಿಂದ ಪೂಜಿಸಲಾಗುತ್ತದೆ.’ಬೃಹ್ಮ ‘ಎಂದರೆ ತಪಸ್ಸು ಮತ್ತು ‘ಚಾರಿಣಿ’ ಎಂದರೆ ಆಚರಿಸುವವಳು.ಅಂದರೆ ಕಠಿಣ ತಪಸ್ಸನ್ನಾಚರಿಸುವವಳು ಎಂಬುದು ಈಕೆಯ ಹೆಸರಿನ ಅರ್ಥವಾಗಿದೆ. ಬ್ರಹ್ಮಚಾರಿಣಿ ದೇವಿಯ ಸ್ವರೂಪ: ವಸ್ತ್ರ:ತಾಯಿಯು ಅತ್ಯಂತ ಶಾಂತ ಹಾಗೂ ಸಾತ್ವಿಕ ರೂಪದಲ್ಲಿದ್ದು,ಬಿಳಿ ಬಣ್ಣದ ಶುಭ್ರ ವಸ್ತ್ರವನ್ನು ಧರಿಸಿರುತ್ತಾಳೆ( ಶ್ವೇತಾಂಬರಧಾರಿಣಿ). ಹಸ್ತಗಳು:ದೇವಿಗೆ ಎರಡು ಕೈಗಳಿದ್ಡು,ಬಲಗೈಯಲ್ಲಿ ಜಪಮಾಲೆ(ರುದ್ರಾಕ್ಷಿ ಮಾಲೆ)ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದಿರುತ್ತಾಳೆ. ವಾಹನ:ಈಕೆಗೆ ಯಾವುದೇ ಪ್ರತ್ಯೇಕ ಬಾಹ್ಯ ವಾಹನ ಅಥವಾ ಆಯುಧಳಿರುವುದಿಲ್ಲ.ಬರಿಗಾಲಿನಲ್ಲಿ ನಡೆದಾಡುವ ತಪಸ್ವಿನಿಯ ರೂಪ ಇವಳದ್ದಾಗಿದೆ. ದೇವಿಯ ಪುರಾಣ ಕಥೆ: ಹಿಂದಿನ ಜನ್ಮದಲ್ಲಿ ಈಕೆಯು ದಕ್ಷ ಪ್ರಜಾಪತಿಯ ಮಗಳಾದ ಸತಿಯಾಗಿ ಜನಿಸಿದ್ದಳು. ನಂತರದ ಜನ್ಮದಲ್ಲಿ ಹಿಮವಂತ ಹಾಗೂ ಮೈನಾ ದೇವಿಯ ಪುತ್ರಿಯಾಗಿ ಪಾರ್ವತಿ ಎಂಬ ಹೆಸರಿನಿಂದ ಜನಿಸಿದಳು. ಭಗವಾನ್ ಶಿವನನ್ನು ತನ್ನ ಪತಿಯಾಗಿ ಪಡೆಯಲು ನಾರದ ಮಹರ್ಸಿಗಳ ಉಪದೇಶದಂತೆ ಕಠೋರವಾದ ತಪಸ್ಸನ್ನು ಆಚರಿಸಿದಳು. ಸಾವಿರಾರು ವರ್ಷಗಳ ಕಾಲ ಕೇವಲ ಹಣ್ಣು-ಹಂಪಲು, ಒಣಗಿದ ಎಲೆಗಳನ್ನು ತಿನ್ನುವುದನ್ನೂ ಬಿಟ್ಟಿಂದ್ದರಿಂದ ಈಕೆಗೆ ‘ಅಪರ್ಣಾ’ ಎಂಬ ಹೆಸರು ಬಂತು.ಈಕೆಯ ಕಠಿಣ ತಪಸ್ಸಿಗೆ ಒಲಿದ ಬ್ರಹ್ಮದೇವನು ಶಿವನು ನಿನಗೆ ಪತಿಯಾಗಿ ಸಿಗಲಿದ್ದಾನೆ ಎಂದು ಆಶೀರ್ವದಿಸಿದನು. ಪೂಜಾ ಮಹತ್ವ: ಬ್ರಹ್ಮಚಾರಿಣಿ ದೇವಿಯ ಆರಾಧನೆಯಿಂದ ಮನುಷ್ಯನಲ್ಲಿ ತಪಸ್ಸು,ತ್ಯಾಗ,ವೈರಾಗ್ಯ,ಸದಾಚಾರ ಮತ್ತು ಸಂಯಮದಂತಹ ಗುಣಗಳು ವೃದ್ಧಿಯಾಗುತ್ತವೆ. ಗ್ರಹ ದೋಷ ನಿವಾರಣೆ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ,ಬ್ರಹ್ಮಚಾರಿಣಿ ದೇವಿಯು ಮಂಗಳ ಗ್ರಹವನ್ನು ನಿಯಂತ್ರಿಸುತ್ತಾಳೆ.ಈಕೆಯನ್ನು ಪೂಜಿಸುವುದರಿಂದ ಜಾತಕದಲ್ಲಿರುವ ಮಂಗಳ ದೋಷಗಳು ನಿವಾರಣೆಯಾಗುತ್ತವೆ. ಪ್ರಿಯವಾದ ನೈವೇದ್ಯ:ದೇವಿಗೆ ಸಕ್ಕರೆ,ಬಿಳಿ ಬಣ್ಣದ ಸಿಹಿತಿಂಡಿಗಳು(ಬರ್ಫಿ),ಪಂಚಾಮೃತ ಮತ್ತು ಕೀರ್(ಪಾಯಸ)ಅನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ದೇವಿಯ ಮಂತ್ರ
​ಓಂ ದೇವಿ ಬ್ರಹ್ಮಚಾರಿಣ್ಯೈ ನಮಃ ॥
​ಪ್ರಾರ್ಥನೆ:
​ದಧಾನಾ ಕರಪದ್ಮಾಭ್ಯಾಮಕ್ಷಮಾಲಾಕಮಂಡಲೂ |
ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ॥

Banner Ad
Banner Ad