Banner Ad

ಸುದ್ದಿ ಕನ್ನಡ ವಾರ್ತೆ

ಕಾರವಾರ:ತಾಲೂಕಿನ ಮಾಜಾಳಿಯ ಕಡಲತೀರದಲ್ಲಿ ಶಿವರಾತ್ರಿ ಅಮವ್ಯಾಸೆಯ
ಪ್ರಯುಕ್ತ ಸಮುದ್ರ ಸ್ನಾನಕ್ಕೆ ಬಂದಿದ್ದ 17 ವರ್ಷದ ಬಾಲಕನೋರ್ವ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ.

Banner Ad

ಮೃತ ಬಾಲಕನನ್ನು ಗಾಂವಗೇರಿಯ ಶ್ಯಾಮ್ ಮಹಾಲೆ (17) ಎಂದು. ಗುರುತಿಸಲಾಗಿದೆ.ಶಿವರಾತ್ರಿ ಹಿನ್ನಲೆಯಲ್ಲಿ ಸಮುದ್ರ ಸ್ನಾನ ಮಾಡುತ್ತಿದ್ದ ವೇಳೆ ಅವನು ಮೃತಪಟ್ಟಿದ್ದಾನೆ.ಸ್ಥಳೀಯರು ರಕ್ಷಣೆ ಮಾಡಲು ಪ್ರಯತ್ನಿಸಿದರು ಎನ್ನಲಾಗಿದೆ.ಘಟನೆಯ ಸಂಬಂಧ ಚಿತ್ತಾಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಬಳಿಕ ಕಡಲತೀರದಲ್ಲಿ ಪೊಲೀಸರು ಕಟ್ಟುನಿಟ್ಟಿನ ಎಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಸಮುದ್ರ ಸ್ನಾನ ಮಾಡುತ್ತಿದ್ದ ಭಕ್ತರನ್ನು ಮೇಲಕ್ಕೆ ಕಳುಹಿಸುವ ಕಾರ್ಯ ನಡೆಯುತ್ತಿದೆ. ಇದೇ ವೇಳೆ ಸ್ನಾನಕ್ಕಿಳಿದ ಇನ್ನೊಬ್ಬ ವ್ಯಕ್ತಿ ಮೂರ್ಚೆ ಬಿದ್ದು ಬಳಿಕ ಚೇತರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.

Banner Ad