Banner Ad

ಸುದ್ದಿ ಕನ್ನಡ ವಾರ್ತೆ

. ಜೋಯಿಡಾ:ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಶ್ರೀ ಮಹಾದೇವ ದೇವರ ವಾರ್ಷಿಕೋತ್ಸವ ದಿನಾಂಕ:18/02/2026 ರ ಬುಧವಾರ ನಡೆಯಲಿದೆ. ಕಾರ್ಯಕ್ರಮದ ನಿಮಿತ್ಯ ಮಧ್ಯಾಹ್ನ 12 ಗಂಟೆಗೆ ಶ್ರೀ ಮಹಾದೇವ ದೇವರ ಮಹಾಭಿಷೇಕ,ಮೂರ್ತಿಯ ಪಾಲ್ಕಿ ಮೆರವಣಿಗೆ,ಶ್ರೀ ದೇವರ ಮಹಾಪೂಜಾ ಕಾರ್ಯಕ್ರಮ ನಡೆಯಲಿದ್ದು ಎಲ್ಲ ಭಕ್ತ ವೃಂದದವರು ಉಪಸ್ಥಿತರಿದ್ದು ತೀರ್ಥ ಪ್ರಸಾದ ಸ್ವೀಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

Banner Ad

ಮಧ್ಯಾಹ್ನ 2:00 ಗಂಟೆಯಿಂದ ರಾತ್ರಿ 10:00 ಗಂಟೆಯವರೆಗೆ ಅನ್ನಸಂತರ್ಪಣೆ, ಸಾಯಂಕಾಲ 8:00 ಗಂಟೆಗೆ ಜ್ಯೋತಿ ಮತ್ತು ಪಾಲ್ಕಿಯ ಮೆರವಣಿಗೆ ನಡೆಯಲಿದೆ. ರಾತ್ರಿಯ 10 ಗಂಟೆಯ ವೇಳೆ ಶ್ರೀ ದೇವರ ಫಲಪಲಾವಳಿಗಳ ಸವಾಲ್ ಕಾರ್ಯಕ್ರಮ ನಡೆಯಲಿದೆ.ರಾತ್ರಿ 12:00 ಗಂಟೆಗೆ ಭಕ್ತ ಜನರ ಮನರಂಜನೆಗಾಗಿ ಪೈಸೋಡಕರ ಸಮಿತಿಯವರ ವತಿಯಿಂದ ಶ್ರೀ ನಾಗನಾಥ ನಾಟ್ಯ ಮಂಡಳ ಕುವೇಶಿ(NGD) ಕಲಾವಿದರಿಂದ ಶ್ರೀ ಸದಾಶಿವ ರಾಮತೆ ವಿರಚಿತ ತ್ಯಾಗ ಎಂಬ ಸುಂದರ ಕೌಟುಂಬಿಕ,ಹೃದಯಸ್ಪರ್ಶಿ, ಸಾಮಾಜಿಕ,ಸಂಗೀತ ನಾಟಕದ ಪ್ರದರ್ಶನ ನಡೆಯಲಿದೆ.ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀ ಮಹಾದೇವ ದೇವರ ಕಮಿಟಿ ಕಾರ್ಟೋಳಿ ಹಾಗೂ ಊರ ನಾಗರಿಕರು ಮುಡಿಯೇ, ಕಸಂಬಾ,ಕರಂಜೋಯಿಡಾ,ಖಾನಗಾಂವ,ಪೈಸೋಡ ವ ನಾಯ್ಕ ಪರಿವಾರದವರು ವಿನಂತಿಸಿಕೊಂಡಿದ್ದಾರೆ.

Banner Ad