ಸುದ್ದಿ ಕನ್ನಡ ವಾರ್ತೆ

ಶಿರಸಿ: ಜೀವನ ನಿರ್ವಹಣೆಗಾಗಿ ಸೆಂಟ್ರಿಂಗ್ ಕೆಲಸ ಮಾಡುತ್ತಾ ಅಂತರಾಷ್ಟಿಯ ಮಟ್ಟದ ಯೋಗಾಸನ ಸ್ವರ್ದೆಗೆ, ತಾಲೂಕಿನ ಕಬ್ಬೆಯ ( ಉಂಚಳ್ಳಿ ) ಗಣೇಶ ವಿಷ್ಣು ನಾಯ್ಕ ಆಯ್ಕೆಯಾಗಿದ್ದಾನೆ. ಇತ್ತೀಚಿಗೆ ತುಮಕೂರಿನಲ್ಲಿ ನಡೆದ ೮ ನೇ ರಾಷ್ಟಮಟ್ಟದ ಯೋಗ ಚಾಂಪಿಯಶೀಪ್‌ನಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿ, ಈಗ ಥೈಲ್ಯಾಂಡ್‌ನಲ್ಲಿ ನಡೆಯುವ ಇಂಡೋ ಥೈಲ್ಯಾಂಡ್ ವರ್ಲ್ಡ ಯೋಗಾಸನ ಚಾಂಪಿಯನ್‌ಶೀಪ್‌ಗೆ ಭಾರತವನ್ನು ಪ್ರತಿನಿಧಿಸಲು ಸ್ವರ್ದೆಗೆ ಭಾಗವಹಿಸಲಿದ್ದಾನೆ. ಇವರ ಸಾಧನೆಯನ್ನು ಗುರುತಿಸಿಬನವಾಸಿ ಬಿಜೆಪಿ ಮಂಡಲದ ಜೊತೆಗೆ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಅನಂತಮೂರ್ತಿ ಹೆಗಡೆ ತಂಡ ಸನ್ಮಾನಿಸಿ ಗೌರವಿಸಿದರು ಮತ್ತು ಆರ್ಥಿಕ ನೆರವು ನೀಡಿದರು.

ನಂತರ ಮಾತನಾಡಿದ ಅವರು ಬಡತನದ ನಡುವೆಯೂ ಯೋಗ ಚಾಂಪಿಯನ್‌ಶೀಪ್‌ನಲ್ಲಿ ಸಾಧನೆ ಮಾಡಿ ಜಿಲ್ಲೆ ಹಾಗೂ ರಾಜ್ಯಕ್ಕೆ ಹೆಮ್ಮೆಯನ್ನು ತಂದಿದ್ದಾನೆ, ಆರ್ಥಿಕವಾಗಿ ಬಡತನ ಇರುವುದರಿಂದ ತಂದೆಯ ಜೋತೆಗೆ ದಿನನಿತ್ಯ ಸೆಂಟ್ರಿಂಗ್ ಮಾಡುತ್ತಿದ್ದಾರೆ. ಇವರು ಯೋಗಾಸನದಲ್ಲಿ ಆಸಕ್ತಿ ಬಂದು ಸಾಧನೆ ಮಾಡಿ ಈಗ ಸ್ವರ್ದೆಯಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆ ಸಂಗತಿಯಾಗಿದೆ. ಪ್ರತಿಯೋಬ್ಬರು ಮನೆಯಲ್ಲಿ ಬೆಳಿಗ್ಗೆ ಯೋಗನ್ನು ಮಾಡುವಂತಾಗಬೇಕು, ಇದರಿಂದ ಮನಸ್ಸನ್ನು, ದೇಹವನ್ನುವನ್ನು ನಿಯಂತ್ರಣದಲ್ಲಿಟ್ಟು ನಮ್ಮನ್ನು ಸರಿಯಾದ ಮಾರ್ಗದಲ್ಲಿ ಕರೆದುಕೊಂಡು ಹೋಗುವ ಸಾಧನವಾಗಿದೆ. ಯೋಗ ಎನ್ನುವಂತಹದ್ದು ಕೆಲವೇ ಕೆಲವು ಕಡೆ ಇತ್ತು ಯೋಗವನ್ನು ವಿಶ್ವದಲ್ಲಿ ಪರಿಚಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ. ನರೇಂದ್ರ ಮೋದಿಯವರ ಕರೆಗೆ 190 ದೇಶದಲ್ಲಿ ಅಂತರಾಷ್ಟಿಯ ಯೋಗವನ್ನು ಮಾಡುತ್ತಿದ್ದಾರೆ ಎಂದರು.

 

ನಂತರ ಸನ್ಮಾನಿಸಿ ಮಾತನಾಡಿಸಿದ ಬನವಾಸಿ ಬಿಜೆಪಿ ಮಂಡಲದ ಅಧ್ಯಕ್ಷರಾದ ರಮೇಶ ನಾಯ್ಕ ಕುಪ್ಪಳ್ಳಿ, ಮಾತನಾಡಿ ಯೋಗh ಎನ್ನುವಂತದ್ದು ಮೊದಲು ಭಾರತ ದೇಶದಲ್ಲಿ ಪ್ರಾಮುಖ್ಯತೆಯನ್ನು ನೀಡಲಾಗುತ್ತಿತ್ತು. ಆದರೆ ನರೇಂದ್ರ ಮೋದಿಯವರು ವಿಶ್ವದಾದ್ಯಂತ ಪರಿಚಯಿಸಿದ್ದಾರೆ. ಗಣೇಶ ವಿಷ್ಣು ನಾಯ್ಕ ಅವರು ಸಾಧನೆ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಹೆಮ್ಮೆಯ ತಂದಿದೆ ಎಂದರು

ಈ ವೇಳೆ ವಿ.ಎಮ್. ಹೆಗಡೆ ಕಬ್ಬೆ ಬಿಜೆಪಿ ಕೋರ್ ಕಮಿಟಿ, ಉಂಚಳ್ಳಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಘವೇಂದ್ರ ಕಬ್ಬೆ, ಪ್ರಧಾನ ಕಾರ್ಯದರ್ಶಿ ಮಂಜುನಾಥ ನಾಯ್ಕ ಮರಿಗುಡ್ಡೆ, ವಾಮನ ನಾಯ್ಕ ಕಾನ್‌ಕೋಪ್ಪ, ಮಂಜುನಾಥ ನಾಯ್ಕ ಹಲಸಿನಕೊಪ್ಪ, ಹರೀಶ ನಾಯ್ಕ ಕುಬೇರ ಗೌಡ, ಮಂಜುನಾಥ ರಾಮ ಗೌಡ, ಚಂದ್ರು ನಾಯ್ಕ, ಬಸವಂತ ಗಂಗೆಮತ್ತ್, ದೇವಕಿ ಅಣ್ಣಪ್ಪ ಗೌಡ, ಹಲವು ಮಹಿಳಾ ನಾಯಕಿಯರು ಸೇರಿದಂತೆ ಇತರಿದ್ದರು.