ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಬಿಟ್ಟು, ಬಿಟ್ಟು ಮಳೆ ಸುರಿಯುತ್ತಿದ್ದು, ದೇಹಳ್ಳಿ ಭಾಗದಲ್ಲಿ ಗಾಳಿ ಮಳೆಯ ಅಪಾರ ನಷ್ಟದ ಮುನ್ನುಡಿ ಬರೆದಿದೆ.

ಮಳೆಯ ಹೊಡೆತಕ್ಕೆ ತಾಲೂಕಿನ ದೇಹಳ್ಳಿ ಗ್ರಾಪಂ ವ್ಯಾಪ್ತಿಯ ಕಣ್ಣುಪಾಲಿನಲ್ಲಿ ವ್ಯಾಪಕ ಹಾನಿ ಉಂಟಾಗಿದೆ. ಪರಮೇಶ್ವರ ಭಟ್ಟ ಅವರ ಮನೆಯ ಮೇಲೆ ಮರಬಿದ್ದು, ಹಾನಿಯಾಗಿದೆ. ವಿ.ಜಿ. ಭಟ್ಟ ಅವರ ತೋಟದಲ್ಲಿ ಅಡಿಕೆ ಮರಗಳು ಮುರಿದು ಬಿದ್ದಿವೆ, ತೆಂಗು ಬಾಳೆ ಗಿಡಗಳೂ ನೆಲಕಚ್ಚಿವೆ. ಅಲ್ಲದೇ ಸುತ್ತ ಮುತ್ತ ಮಳೆಗಾಲದ ಸಲುವಾಗಿ ಅಂಗಳದಲ್ಲಿ ಹಾಕಿದ್ದ ಚಪ್ಪರದ ತಗಡು, ಪ್ಲಾಸ್ಟಿಕ್ ಹಾರಿಹೋಗಿ, ಪುನಃ ಸಿದ್ಧತೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಆದ ಹಾನಿಯನ್ನು ಪರಿಶೀಲಿಸಿದ್ದಾರೆ.