ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಗಗನ ಗಾಂವ್ಕರ್ ನಿಗೆ ಕನ್ನಡ ಕುವರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಕಳೆದ ಮಾರ್ಚ್ ನಲ್ಲಿ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯ 125 ಅಂಕಗಳಿಗೆ ಅತಿ ಹೆಚ್ಚು ಅಂದರೆ 121 ರಿಂದ 125 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆ ದಾವಣಗೆರೆ ಇವರು ಪ್ರಶಸ್ತಿ ನೀಡಲು ನಿರ್ಧರಿಸಿದ್ದರು. ಅತಿ ಹೆಚ್ಚು ಅಂಕ ಗಳಿಸಿದ ಕನ್ನಡ ಕುವರ ಕನ್ನಡ ಕುವರಿ ಯರಿಗಾಗಿ ಈ ಪ್ರಶಸ್ತಿ ಘೋಷಿಸಲಾಗಿತ್ತು. ಅದರಂತೆ ಸಾಕಷ್ಟು ವಿದ್ಯಾರ್ಥಿಗಳು ರಾಜ್ಯದಲ್ಲಿ ದಾಖಲೆ ಮಾಡಿದ್ದರು.

ಯಲ್ಲಾಪುರ ತಾಲೂಕಿನ ವಜ್ರಳ್ಳಿಯ ಬಾಗಿನ ಕಟ್ಟಾದ ಮಹೇಶ್ ಗಾಂವ್ಕರ್ ಇವರ ಪುತ್ರ ಗಗನ ಗಾಂವ್ಕರ್ ವಜ್ರಳ್ಳಿಯ ಸರ್ವೋದಯ ಪ್ರೌಢ ಶಾಲೆಯಲ್ಲಿ ಈ ವರ್ಷನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 125ಕ್ಕೆ 123 ಅಂಕ ಗಳಿಸಿದ್ದನು.
ಕನ್ನಡ ಭಾಷೆಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ನಿನ್ನೆ ಕನ್ನಡ ಕುವರ ಪ್ರಶಸ್ತಿಯನ್ನು ಕುಮಾರ ಗಗನ ಮಹೇಶ್ ಗಾಂವ್ಕರ್ ಈತನಿಗೆ ಕೊಟ್ಟು ಗೌರವಿಸಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಗಗನ ಇದು ನನಗೆ ತುಂಬ ಸಂತೋಷ ತಂದಿದೆ. ನಾನು ಕನ್ನಡಿಗ ರಾಜ್ಯದಲ್ಲಿ ಕನ್ನಡ ಬಳಕೆ ಕಡಿಮೆ ಆಗುತ್ತಿರುವ ಈ ಸಂದರ್ಭದಲ್ಲಿ ಕಲಾಕುಂಚ ಸಂಸ್ಥೆ ಕನ್ನಡ ಬೆಳೆಯಲು ನೀಡುತ್ತಿರುವ ಪ್ರೋತ್ಸಾಹ ಮೆಚ್ಚಲೇಬೇಕು ಎಂದಿದ್ದಾನೆ.