ಸುದ್ದಿ ಕನ್ನಡ ವಾರ್ತೆ

ಶಿರಸಿಯ ಪ್ರತಿಷ್ಠಿತ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ( ಕೆಡಿಸಿಸಿ ಬ್ಯಾಂಕ್ ) 2025-26 ನೇ ಸಾಲಿನಲ್ಲಿ 27.35 ಕೋಟಿ ರೂಪಾಯಿ ನಿವ್ವಳಲಾಭ ಗಳಿಸಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಶಿವರಾಮ ಹೆಬ್ಬಾರ ಹೇಳಿದರು.
ಶನಿವಾರ ಬ್ಯಾಂಕ್ ನ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾಹಿತಿ ನೀಡಿದರು.

ಬ್ಯಾಂಕಿನ ಶೇರು ಬಂಡವಾಳ 145.11 ಕೋಟಿ ಗಳಿಂದ ರೂ 156.85ಕೋಟಿ ಕೋಟಿಗೆ, ನಿಧಿಗಳು 351.44ಕೋಟಿ ಗಳಿಂದ 380.60ಕೋಟಿಗಳಿಗೆ ಹಾಗೂ ಠೇವುಗಳು 3569.45ಕೋಟಿ ಗಳಿಂದ 4191.41 ಕೋಟಿ ರೂಪಾಯಿ ಗೆ ಏರಿಕೆ ಕಂಡಿದೆ.ಒಟ್ಟೂ ಆದಾಯ 409.70ಕೋಟಿ ಗಳಾಗಿರುತ್ತದೆ.

3384.85 ಕೋಟಿಯಷ್ಟು ಸಾಲ ಬಾಕಿ ಇದ್ದು ದುಡಿಯುವ ಬಂಡವಾಳ 5348.77 ಕೋಟಿ ತಲುಪಿದೆ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕೃಷ್ಣ ದೇಸಾಯಿ ನಿರ್ದೇಶಕರಾದ ಪ್ರಕಾಶ ಗುನಗಾ, ವಿಶ್ವನಾಥ ಭಟ್ , ರಾಘವೇಂದ್ರ ಶಾಸ್ತ್ರಿ, ರಾಜಗೋಪಾಲ್ ಅಡಿ, ಆರ್ ಎಂ ಹೆಗಡೆ, ತಿಮ್ಮಯ್ಯ ಹೆಗಡೆ, ಎಂ ಎ ಹೆಗಡೆ, ರವಿ ಹೆಗಡೆ,ಸುರೇಶ್ಚಂದ್ರ ಹೆಗಡೆ ಸೇರಿದಂತೆ ಹಲವರು ಇದ್ದರು.