ಸುದ್ದಿ ಕನ್ನಡ ವಾರ್ತೆ
ಕೈಗಾ: ಮುಂಬೈನ ಮೀರಾ ರೋಡ್‌ನಲ್ಲಿರುವ ಲತಾ ಮಂಗೇಶ್ವರ್ ನಾಟ್ಯಗೃಹ ಸಭಾಂಗಣದಲ್ಲಿ ನಡೆದ ಪ್ರತಿಷ್ಠಿತ ‘ಅಂತರಂಗ ಉತ್ಸವ-2026” (ಸೀಸನ್-6) ರಾಷ್ಟ್ರೀಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೈಗಾ ಅಣುಶಕ್ತಿ ಕೇಂದ್ರದ ಶಾಲಾ ವಿದ್ಯಾರ್ಥಿ ನಮನ್ ಆನಂದ ಹೆಂಬ್ರಾಮ್ ಪ್ರಥಮ ಸ್ಥಾನ ಗಳಿಸಿದ್ದಾನೆ.ಅಖಿಲ ಭಾರತೀಯ ಡ್ಯಾನ್ಸ್ ಅಸೋಸಿಯೇಷನ್ ಆಯೋಜಿಸಿದ್ದ ಈ ಸ್ಪರ್ಧೆಯ ಸಬ್-ಜೂನಿಯರ್ ವಿಭಾಗದ ಶಾಸ್ತ್ರೀಯ ನೃತ್ಯ ಸ್ಪರ್ಧೆಯಲ್ಲಿ ನಮನ್ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದ್ದಾನೆ.
ಕೈಗಾ ಅಣುಶಕ್ತಿ ಕೇಂದ್ರದ ವಸತಿ ಸಂಕೀರ್ಣದ 7 ವರ್ಷದ ಈ ವಿದ್ಯಾರ್ಥಿಯ ಸಾಧನೆಗೆ ಶಾಲೆಯ ಶಿಕ್ಷಕ ವೃಂದ, ಕೈಗಾ ಅಣುಶಕ್ತಿ ಕೇಂದ್ರದ ಅಧಿಕಾರಿಗಳು ಹಾಗೂ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಾಷ್ಟ್ರ ಮಟ್ಟದ ವೇದಿಕೆಯಲ್ಲಿ ಜಿಲ್ಲೆಯ ಪ್ರತಿಭೆ ಮಿಂಚಿರುವುದು ಕ್ರೀಡಾ ಮತ್ತು ಸಾಂಸ್ಕೃತಿಕ ವಲಯದಲ್ಲಿ ಸಂತಸ ತಂದಿದೆ.
