Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಶಿವಪುರದ ನಾಗರಿಕ ವೇದಿಕೆ ಯಿಂದ ನಡೆದ ಸಭೆಯಲ್ಲಿ ಈ ಕೆಳಗಿನಂತೆ , ಅನೇಕ ವಿಷಯಗಳ ಚರ್ಚೆಯಾಗಿದೆ. ಮತ್ತು ಸರಕಾರ ಮೂಲ ನಿವಾಸಿಗಳ ಬದುಕಿಗೆ ಆಸರೆ ಯಾಗಬೇಕು ಎಂಬ ನಿರ್ಣಯವನ್ನು ಅಂಗೀಕರಿಸಲಾಗಿದೆ .

ಶಿವಪುರ ನೇತುರ್ಗ , ಹೆಬ್ಬಾಳ , ಕೊಡತಳ್ಳಿಜೊತೆಗೆ ತಾಲೂಕಿನ ಗ್ರಾಮೀಣ ಬಾಗದ ನಿವಾಸಿಗಳ ರಸ್ತೆ ಸುಧಾರಣೆ , ಕಾಳಿ ನದಿಗೆ ಚಾರ್ಜ್ ಕಲ್ಪಿಸುವುದು ಕಾಳಿ ಪರಿಸರ ಸೂಕ್ಷ್ಮ ವಲಯದಲ್ಲಿರುವ ಮೂಲ ನಿವಾಸಿಗಳ ಬದುಕಿಗೆ ಅರಣ್ಯ ಇಲಾಖೆಯಿಂದ ಯಾವುದೇ ತೊಂದರೆ ಆಗಬಾರದು. ಕಾನೂನಿನಲ್ಲಿ ಇರುವ ಎಲ್ಲ ಸವಲತ್ತುಗಳನ್ನು ಸ್ಥಳೀಯ ಅಧಿಕಾರಿಗಳೇ ನೀಡಬೇಕು. ಅದು ಬಿಟ್ಟು ಎಲ್ಲವನ್ನೂ ಬೆಂಗಳೂರಿಗೆ ಹಿರಿಯ ಅಧಿಕಾರಿಗಳಿಗೆ ಕಳಿಸಿ ಸಮಸ್ಯೆ ಉಂಟು ಮಾಡಬಾರದು. ಕಾನೂನಿನ ಪ್ರಕಾರ ಇರುವ ಹಕ್ಕನ್ನು ಜನತೆಗೆ ನೀಡಲು ಹಿಂದೆ ಸರಿಯಬಾರದು ಎಂದು ತೀರ್ಮಾನಿಸಲಾಗಿದೆ. ಆಸ್ಪತ್ರೆ ನಿರ್ಮಾಣ ದೇವಸ್ಥಾನಕ್ಕೆ ಅನುದಾನ ತರುವ ಕುರಿತು ಚರ್ಚಿಸಲಾಗಿದೆ.

Banner Ad

ಕಾಳಿನದಿಗೆ ಸೇತುವೆ ಕಟ್ಟುವ ಕೆಲಸಮತ್ತು ಸೊಪ್ಪಿನ ಬೆಟ್ಟದ ಬ ಖರಾಬನ್ನು ರದ್ದು ಪಡಿಸಿ ಸೊಪ್ಪಿನ ಬೆಟ್ಟದ ಹಕ್ಕು ರೈತರಿಗೆ ಇರುವಂತೆ ಮಾಡಲು ಕೇಳಿಕೊಳ್ಳಲು ತೀರ್ಮಾನಿಸಲಾಗಿದೆ.
ಈ ಸಭೆಗೆ ಸಂಪನ್ಮೂಲ ವ್ಯಕ್ತಿಯಾಗಿ ಬಂದ ಯಲ್ಲಾಪುರದ ನಾರಾಯಣ ಭಟ್ಟ ಅಗ್ಗಾಸಿ ಕುಂಬ್ರಿ , ರಾಜಶೇಖರ ಧೂಳಿ , ಜಿ ಎನ್ ಜಿ ಇತರರು ಮಾತನಾಡಿದರು.
ಸ್ಥಳೀಯರಾದ ಗೋಪಾಲ ಭಟ್ಟ ಶಿವಪುರ , ವಿಜಿ ಮಿರಾಶಿ, ಡಿ ಆರ್ ಗೌಡ , ಗಜಾನನ ಭಾಗವತ್ ನರಸಿಂಹ ಗೌಡ ಇತರರು ಇದ್ದ ಸಭೆಯ ಅಧ್ಯಕ್ಷತೆಯನ್ನು ಬಿ.ಎಸ್ ಗೌಡ ವಹಿಸಿದ್ದರು. .ಒಟ್ಟಾರೆ ನಿರ್ಣಯ ದಲ್ಲಿ ಕಾಳಿ ಹುಲಿ ಯೋಜನಾ ಪ್ರದೇಶ ದಲ್ಲಿರುವ ಮೂಲ ನಿವಾಸಿ ಗಳಿಗೆ ಬದುಕಲುಕಾನೂನಿನಲ್ಲಿ ಇರುವ ಅವಕಾಶ ಕ್ಕೆ ತೊಂದರೆ ಕೊಡಬಾರದು ಕಾನೂನಿನಲ್ಲಿ ಇರುವ ಅವಕಾಶ ವನ್ನು ನೀಡಲು ಅಸಹಕಾರ ನೀಡಬಾರದು. ಅರಣ್ಯ ಬೆಳೆಸಿ ಉಳಿಸಿದ ಜನತೆಗೆ ಗೌರವ ದಿಂದ ಬದುಕುವ ಅವಕಾಶ ವನ್ನು ಅರಣ್ಯ ಇಲಾಖೆ ನೀಡಬೇಕು ಎಂಬ ನಿರ್ಣಯ ಗಳನ್ನು ಸಭೆಯಲ್ಲಿ ಪಾಸು ಮಾಡಲಾಗಿದೆ

Banner Ad