ಸುದ್ದಿ ಕನ್ನಡ ವಾರ್ತೆ
ಶಿರಸಿ: ಚಹಾ, ಬಜೆ ಅಂಗಡಿ ಇಟ್ಟು ಬದುಕು ನಡೆಸುವ ಸಣ್ಣ ಹೋಟೆಲ್ ಮಾಲಕನ ಮಗಳು ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರಂತರ ಪರಿಶ್ರಮ ಶ್ರದ್ದೆಯಿಂದ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದಿದ್ದಾಳೆ.
ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಲತಿಕಾ ನಾಗೇಶ ಮೊಗೇರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಗಮಬ ಸೆಳೆವ ಸಾಧನೆ ಮಾಡಿದ್ದಾಳೆ. ಕನ್ನಡಕ್ಕೆ ೧೨೫, ಇಂಗ್ಲೀಷ್, ಸಂಸ್ಕೃತ, ಗಣಿತ, ಸಮಾಜ ವಿಜ್ಞಾನದಲ್ಲಿ ೧೦೦ರಷ್ಟು ಅಂಕ ಪಡೆದ ಈಕೆ ವಿಜ್ಞಾನದಲ್ಲಿ ೨ ಅಂಕ ಕಡಿಮೆ ಬಂದು ರಾಜ್ಯಕ್ಕೆ ಮೂರನೇ ಸ್ಥಾನಕ್ಕೆ ತೃಪ್ತಳಾದಳು.
ಈಕೆಯ ತಂದೆ ನಗರದ ಚನ್ನಪಟ್ಟಣ ಭಜಾರ್ ನಲ್ಲಿ ಶ್ರೀದೇವಿ ಕ್ಯಾಂಟೀನ್ ಎಂಬ ಸಣ್ಣ ಅಂಗಡಿ ನಡೆಸುತ್ತಿದ್ದಾರೆ. ಅಂದಿನ ಅಭ್ಯಾಸ ಅಂದೇ ಮಾಡುತ್ತಿದ್ದ ಈಕೆ ಮೊಬೈಲ್, ಟಿವಿ ಕೂಡ ನೋಡ್ತಿರಲಿಲ್ಲ ಎಂದು ಅಪ್ಪ ನಾಗೇಶ, ತಾಯಿ ಲೀಲಾವತಿ ಅಭಿಮಾನದಲ್ಲಿ ಹೇಳುತ್ತಾರೆ.
