ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕು ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟ
ದಿನಾಂಕ 11.09.2026 ರಂದು ಸರಕಾರಿ ಪ್ರೌಢಶಾಲೆ ಬೈಲಪಾರದಲ್ಲಿ ನಡೆದಿದ್ದು ಸರಕಾರಿ ಪ್ರೌಢಶಾಲೆ ಗುಂದದ ಬಾಲಕರು-ಬಾಲಕಿಯರು ಥ್ರೋ ಬಾಲ್ ಸ್ಪರ್ಧೆಯಲ್ಲಿ ತಾಲೂಕ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ..
ವಿದ್ಯಾರ್ಥಿಗಳ ಸಾಧನೆಗೆ ಮತ್ತು ಮಾರ್ಗದರ್ಶನ ಮಾಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಫಕೀರಪ್ಪ ದರಿಗೊಂಡ ಇವರಿಗೆ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಜೋಸಫ್ ಸರ್ ಮತ್ತು ಸಹ ಶಿಕ್ಷಕರಾದ ಗೋಕುಲ ಸ್ಥಳೇಕರ,ಪುರುಷೋತ್ತಮ ಜಿ, ನವೀನ ಶೇಟ್,ಬಸವರಾಜ,ಸಹ ಶಿಕ್ಷಕಿಯರಾದ ದಿವ್ಯಾ ಮೇಡಂ,ರಿಯಾ, ಬೋಧಕೇತರ ಸಿಬ್ಬಂದಿ ಸದಾನಂದ ವೇಳಿಪ ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು, ಉಪಾಧ್ಯಕ್ಷರು ,ಸರ್ವ ಸದಸ್ಯರು, ಪಾಲಕರು, ಗ್ರಾಮಸ್ಥರು,ಗಣ್ಯರು ಅಭಿನಂದಿಸಿದ್ದಾರೆ. ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿಯೂ ಉತ್ತಮ ಸಾಧನೆ ಮಾಡಿ ಶಾಲೆಯ,ಊರಿನ,ತಾಲೂಕಿನ ಕೀರ್ತಿಯನ್ನು ಹೆಚ್ಚಿಸಲಿ ಎಂದು ಎಲ್ಲರ ಪರವಾಗಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಜೋಸಫ್ ಸರ್ ಶುಭ ಹಾರೈಸಿದ್ದಾರೆ.
