ಸುದ್ದಿ ಕನ್ನಡ ವಾರ್ತೆ

ತೀರ್ಥಹಳ್ಳಿ : ರಾಜ್ಯ ಹೆದ್ದಾರಿ ತೀರ್ಥಹಳ್ಳಿ ಆಗುಂಬೆ ಉಡುಪಿ ಸಂಪರ್ಕ ರಸ್ತೆಯ ಆಗುಂಬೆ ಘಾಟಿಯ ಸೋಮೇಶ್ವರದಿಂದ ಎರಡನೆಯ ತಿರುವಿನಲ್ಲಿ ತರಕಾರಿ ತುಂಬಿದ ಪಿಕಪ್ ಗಾಡಿಯೊಂದು ಚಾಲಕನ ನಿಯಂತ್ರಣ ತಪ್ಪಿ 80 ಅಡಿ ಕಂದಕಕ್ಕೆ ಬಿದ್ದಿದ್ದು ಗಾಡಿ ಸಂಪೂರ್ಣ ಪ್ರಮಾಣದಲ್ಲಿ ಜಕಮ್ ಗೊಂಡಿದೆ.

ಅದೃಷ್ಟವಶಾತ್ ವಾಹನ ಚಾಲಕ ವಾಹನ ಬಿಟ್ಟು ಹೊರಗೆ ಹಾರಿದ್ದು ಪ್ರಾಣಪಯದಿಂದ ಪಾರಾಗಿದ್ದಾನೆ. ವಾಹನದಲ್ಲಿ ಇದ್ದ ಇನ್ನೊಬ್ಬ ವ್ಯಕ್ತಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.