ಸುದ್ದಿ ಕನ್ನಡ ವಾರ್ತೆ
ತಾಲೂಕಾ ಕೇಂದ್ರವಾದರೂ ಆಧಾರ್ (ಜೋಡಣೆ) ಕೇಂದ್ರವಿಲ್ಲದ ಜೊಯಿಡಾ,,,
ಅರೇ ಇದೇನಿದು ಅಂತೀರಾ ಹೌದು ಜೊಯಿಡಾ ತಾಲೂಕು ಕೇಂದ್ರವಾದರೂ, ಇಲ್ಲಿ ಆಧಾರ್ ಕೇಂದ್ರವಿಲ್ಲ. ಪ್ರತಿ ದಿನ ನೂರಾರು ಜನರು ಬಂದು ಆಧಾರ್ , ತಿದ್ದುಪಡಿ , ಮೊಬೈಲ್ ಲಿಂಕ್ ಗಾಗಿ ಒದ್ದಾಡುತ್ತಾರೆ. ಆದರೆ ಜನರು ಆಧಾರ ಕೆಲಸಕ್ಕೆ ದಾಂಡೇಲಿ ಹೋಗಬೇಕು ಇಲ್ಲವೇ 50 ಕಿ ಮೀ ದೂರದ ರಾಮನಗರ ಕ್ಕೆ ಹೋಗಬೇಕು. ಇದು ತುಂಬಾ ಬೇಸರದ ಸಂಗತಿ ಯಾಗಿದೆ. ಜೋಯಿಡಾ ಬರಲು 25ರಿಂದ 50 ಕಿಮೀ ಕಷ್ಟ ಪಡುವ ಜನರು ಮತ್ತೆ ದಾಂಡೇಲಿ, ರಾಮನಗರ ಗಳಿಗೆ ಹೋಗಿ ಕೆಲಸ ಮಾಡಿಕೊಳ್ಳುವುದು ಹೇಗೆ ಆದರೆ ಯಾರಿಗೂ ಈ ಬಗ್ಗೆ ಕಾಳಜಿ ಇಲ್ಲ.
ಅಧಿಕಾರಿ ವರ್ಗವೂ ಕೂಡ ಏನು ಮಾಡಲು ತೋರದೆ ರಾಮನಗರ ಹೋಗಿ ನೋಡಿ. ದಾಂಡೇಲಿ ಹೋಗಿ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಇದು ಜೊಯಿಡಾ ದ ದುಸ್ಥಿತಿ. ಕಳೆದ 2 ವರ್ಷದಿಂದ ವಾರದಲ್ಲಿ ಒಂದು ದಿನ ರಾಮನಗರ ಕೇಂದ್ರದವರು ಜೊಯಿಡಾ ಕ್ಕೆ ಬರುತ್ತಿದ್ದರು. ಸಾಲುಗಟ್ಟಿ ನಿಂತ ಜನರನ್ನು ಒಂದು ದಿನದ ಕಚೇರಿ ವೇಳೆಯಲ್ಲಿ ಅದೂ ಕೂಡ , ವಿದ್ಯುತ್ ಸರ್ವರ್ ಸಮಸ್ಯೆಗಳ ನಡುವೆ ನಿಭಾಯಿಸುವುದು ಕಷ್ಟಕರ ವಾಗಿತ್ತು .ಈಗ ಜಿಪಿಎಸ್ ಸಮಸ್ಯೆ ಇಂದ ರಾಮನಗರ ದವರೂ ಬರುತ್ತಿಲ್ಲ.
ಜಿಲ್ಲಾಧಿಕಾರಿಗಳು ಈಗಾಗಲೇ ಮಂಜೂರಿ ನೀಡಿದ ಆಧಾರ ಕೇಂದ್ರಒಂದು ಜೊಯಿಡಾ ದಲ್ಲಿ ಮತ್ತೊಂದು ರಾಮನಗರ ದಲ್ಲಿ ಕಾರ್ಯ ನಿರ್ವಹಿಸಬೇಕಿತ್ತು.ಆದರೆ ರಾಮನಗರದಲ್ಲಿ ಎರಡು ಕೇಂದ್ರ ಗಳು ಕೆಲಸ ನಿರ್ವಹಿಸುತ್ತಿವೆ ದಯ ಮಾಡಿ ಈ ಎರಡು ಕೇಂದ್ರಗಳಲ್ಲಿ ಒಂದನ್ನು ಜೊಯಿಡಾ ಕ್ಕೆ ವರ್ಗಾಯಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಿ ಎಂದು ಜನತೆ ಜಿಲ್ಲಾಧಿಕಾರಿಗಳನ್ನು ವಿನಂತಿಸಿದ್ದಾರೆ. ಈಗ ಪ್ರತಿ ಕೆಲಸಕ್ಕೂ ಆಧಾರ ಬೇಕು. ಆಧಾರ್ ಲಿಂಕ್ ಬೇಕು ಹಾಗಾಗಿ ಜನರ ಬೇಡಿಕೆಯನ್ನು ಜಿಲ್ಲಾಧಿಕಾರಿ ಗಳು ಕೂಡಲೇ ಈಡೇರಿಸಲು ಕೇಳಿಕೊಂಡಿದ್ದಾರೆ.
