ಸುದ್ದಿ ಕನ್ನಡ ವಾರ್ತೆ
ಜೋಯಿಡಾ:ತಾಲೂಕಿನ ರಾಮನಗರ ಗ್ರಾಮ ಪಂಚಾಯತ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹನುಮಾನ ಲೇನ್ ಶಾಲೆಯ ಶಾಲಾ ಸಂಸತ್ತು ರಚನೆಗೆ ಸಂಬಂಧಿಸಿದಂತೆ, ಆರಂಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ ಚುನಾವಣೆಯ ಪ್ರಕ್ರಿಯೆಯ ಬಗ್ಗೆ ವಿವರವಾದ ಮಾಹಿತಿ ನೀಡಿ,ವಿದ್ಯಾರ್ಥಿ ಸಂಸತ್ ಚುನಾವಣೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದರು.
ಶಾಲಾ ಚಟುವಟಿಕೆಗಳಿಗೆ ಸಂಬಂಧಿಸಿದ 2026-2027ನೇ ಶೈಕ್ಷಣಿಕ ವರ್ಷದ ಶಾಲಾ ಚಟುವಟಿಕೆಗಳನ್ನು ವ್ಯವಸ್ಥಿತವಾಗಿ ನಡೆಸಲು ಶಾಲಾ ಸಂಸತ್ತು ರಚನೆಯ ನಿಮಿತ್ತ ಚುನಾವಣೆ ನಡೆದು ಮತದಾನ ಪ್ರಕ್ರಿಯೆಯ ಮೂಲಕ ಸಂಸತ್ತು ರಚನೆಗೊಂಡಿತು.ಸಾರ್ವತ್ರಿಕ ಚುನಾವಣೆಯಲ್ಲಿ ಅನುಸರಿಸುವ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿತ್ತು ನಾಮಪತ್ರ ಸಲ್ಲಿಕೆಗೆ ಕಾಲಾವಕಾಶ ಪರಿಶೀಲನೆ, ಹಿಂಪಡೆಯುವಿಕೆ, ಪ್ರಚಾರ, ಮತದಾನ ಕೊಠಡಿ ಬಂದೋಬಸ್ತ್ ವ್ಯವಸ್ಥೆ ನಾಮಪತ್ರ ಸಲ್ಲಿಕೆ, ಮತಪತ್ರ, ಮತಪೆಟ್ಟಿಗೆ, ಮತಮುದ್ರೆ, ಶಾಹಿ ಫಲಿತಾಂಶ ಘೋಷಣೆ,ಪ್ರಮಾಣ ವಚನ ಬೋಧನೆ,ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ,ಮಂತ್ರಿ ಮಂಡಲ ರಚನೆ, ಬಂದೋಬಸ್ತ್ ವ್ಯವಸ್ಥೆ,ಗುರುತಿನ ಚೀಟಿಯಾಗಿ ಶಾಲಾ ಗುರುತಿನ ಚೀಟಿ ಗುರುತಿನ ಚೀಟಿ ಇಲ್ಲದವರಿಗೆ ಆಧಾರ್ ಕಾರ್ಡನ್ನು ಬಳಸಲು ಅವಕಾಶ ನೀಡಲಾಯಿತು ಮತಗಟ್ಟೆ ಅಧಿಕಾರಿ ಆರೋಗ್ಯ ಕಾರ್ಯಕರ್ತೆ ಆಶಾ ಕಾರ್ಯಕರ್ತೆ ಮತದಾನ ಚಟುವಟಿಕೆಯಲ್ಲಿ ಸಹಕರಿಸಿದರು ಒಟ್ಟು 110 ವಿದ್ಯಾರ್ಥಿಗಳು ಸಂತಸದಿಂದ ಸರತಿಯ ಸಾಲಿನಲ್ಲಿ ನಿಂತು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿದರು ಚುನಾವಣೆಯ ಮತಗಟ್ಟೆ ಅಧಿ ಕಾರಿಗಳಾಗಿ ರಾಮನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಶಾಲೆಯ ಪ್ರಭಾರ ಮುಖ್ಯ ಶಿಕ್ಷಕರಾದ ಬಿ ಹೆಚ್ ಭಾಗವಾನ, ಸಹ ಶಿಕ್ಷಕರಾದ ನಾಗರತ್ನ ಮೊಗೇರ, ಅನಿಸ್ ಫಾತಿಮಾ, ಮಂಜುನಾಥ ಕೊಟಬಾಗಿ,ಸುನಿತಾ ಆರ್, ಸಂಜನಾ ಮಿರಾಶಿ ಮುಕ್ತ, ನ್ಯಾಯ ಸಮ್ಮತ, ಪಾರದರ್ಶಕ ಚುನಾವಣಾ ಮತದಾನ ಪ್ರಕ್ರಿಯೆಯನ್ನು ನಡೆಸಿಕೊಟ್ಟರು.
ಶಾಲಾ ಸಂಸತ್ತಿನಲ್ಲಿ ಮುಖ್ಯಮಂತ್ರಿ ಶ್ರೇಯಸ ಗಾಂವಕರ,ಕ್ರೀಡಾಮಂತ್ರಿ ,ಉಪಮುಖ್ಯಮಂತ್ರಿ ದುರ್ವಾ ದೇಸಾಯಿ,ರಕ್ಷಣಾ ಮಂತ್ರಿ ಪ್ರಪುಲ್ ಮಿರಾಶಿ, ಪ್ರಾರ್ಥನಾ ಮಂತ್ರಿ ಮನೋಜ ಮಿರಾಶಿ, ಆಹಾರ ಮಂತ್ರಿ ಅದಿತಿ ಸಾವಂತ,ಸಹಕಾರ ಮಂತ್ರಿ ಸುಪ್ರೀಯಾ ದೇಸಾಯಿ, ವಾಚನಾಲಯ ಮಂತ್ರಿ ಅಪೇಕ್ಷಾ ದೇಸಾಯಿ, ಆರೋಗ್ಯ ಮಂತ್ರಿ ತಕ್ಷಿಲ್ ನಾಯ್ಕ,ಅಂಶ ಗಾವಡೆ, ಸ್ವಚ್ಛತಾ ಮಂತ್ರಿ ಸಮೀಕ್ಷಾ ಪಾಟೀಲ,ರಿತೇಶ ಮಿರಾಶಿ, ನೀರಾವರಿ ಮಂತ್ರಿ ಶಾಬಾ ಗಾವಡೆ,ಗೋವರ್ಧನ ದೇಸಾಯಿ ತಮ್ಮ ತಮ್ಮ ಜವಾಬ್ದಾರಿಗಳನ್ನು ಹಾಗೂ ಕಾರ್ಯಗಳ ಪಟ್ಟಿಯನ್ನು ಆಯ್ಕೆಯಾದ ವಿದ್ಯಾರ್ಥಿಗಳು ವಹಿಸಿಕೊಂಡರು.
