Banner Ad

ಸುದ್ದಿ ಕನ್ನಡ ವಾರ್ತೆ

ಮೈಸೂರು; ಮಾಜಿ ಪ್ರೇಮಿಯೊಬ್ಬನ ಕಾಟ ತಡೆಯಲಾರದೆ ಯುವತಿ ಸೇರಿದಂತೆ ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಮೈಸೂರು ಜಿಲ್ಲೆ ಟಿ.ನರಸೀಪುರ ತಾಲ್ಲೂಕಿನ ಕೆಂಪಯ್ಯನಹುAಡಿಯಲ್ಲಿ ಸೋಮವಾರ ನಡೆದಿದೆ.
ಶಿವಣ್ಣ(೫೪), ನಾಗರತ್ನ(೪೮) ಹಾಗೂ ರಕ್ಷಿತಾ(೨೧) ಆತ್ಮಹತ್ಯೆಗೆ ಶರಣಾದವರು. ಅದೇ ಗ್ರಾಮದ ಉಲ್ಲಾಸ್ ಗೌಡನ ಕಿರುಕುಳ ನೀಡಿರುವ ಆರೋಪಕ್ಕೆ ಗುರಿಯಾಗಿದ್ದಾರೆ.

Banner Ad

ಸಾವಿಗೆ ಕಾರಣವಾದ ವರನಿಗೆ ಕಳುಹಿಸಿದ ಮೆಸೇಜ್
ರಕ್ಷಿತಾ ಹಾಗೂ ಉಲ್ಲಾಸ್‌ಗೌಡ ಇಬ್ಬರು ಒಂದೇ ಗ್ರಾಮದವರು. ಉಲ್ಲಾಸ್ ಗೌಡ ಮತ್ತು ರಕ್ಷಿತಾ ಇಬ್ಬರು ಪ್ರೀತಿಸುತ್ತಿದ್ದರೆನ್ನಲಾಗಿದೆ. ಆದರೆ ಇಬ್ಬರು ಬೇರೆ ಜಾತಿಯಾಗಿದ್ದರಿಂದ ಮದುವೆಗೆ ಒಪ್ಪಿಗೆ ಸಿಗಲಿಲ್ಲ.
ರಕ್ಷಿತಾಗೆ ಮದುವೆ ನಿಶ್ಚಯವಾಗಿತ್ತು. ನಿತ್ಯ ಇನ್ನೂ ಎರಡು ದಿನ ಮದುವೆಯಾಗಬೇಕಾಗಿತ್ತು. ರಕ್ಷಿತಾ ಮದುವೆ ನಿರಾಕರಿಸಿಲ್ಲ ಎಂಬುದನ್ನು ಅರಿತ ಉಲ್ಲಾಸ್‌ಗೌಡ, ರಕ್ಷಿತಾ ಕಳುಹಿಸಿದ ಮೆಸೇಜ್ ಹಾಗೂ ಫೋಟೋಗಳನ್ನು ವರನಿಗೆ ಕಳುಹಿಸಿದ ಎನ್ನಲಾಗಿದೆ.

ಇದರಿಂದ ಮದುವೆ ನಿಂತು ಹೋಗುವುದು ಗೊತ್ತಾಗುತ್ತಿದ್ದಂತೆ ಮೂವರು ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ವಿಷ ಸೇವಿಸಿದ ಮೇಲೆ ಕಿರಾಚಡಿದ್ದರಿಂದ ಅಕ್ಕ ಪಕ್ಕದವರು ಹೋಗಿ ನೋಡಿದಾಗ ಮೂವರು ಅಸ್ವಸ್ಥರಾಗಿದ್ದರು. ಆಸ್ಪತ್ರೆಗೆ ಸೇರಿಸಬೇಕೆಂದರು ಅಷ್ಟೊತ್ತಿಗೆ ಮೂವರು ಮೃತಪಟ್ಟಿದ್ದರು.
ಡೆತ್ ನೋಟ್
ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ರಕ್ಷಿತಾ ಡೆತ್‌ನೋಟ್ ಬರೆದಿಟ್ಟಿದ್ದಾರೆ. ಮದುವೆ ಇನ್ನು ಎರಡು ದಿನ ಇತ್ತು. ವರನಿಗೆ ಮೆಸೇಜ್ ಮತ್ತು ತಾನು ಇದ್ದ ಫೋಟೋ ಕಳುಹಿಸಿ ಮದುವೆ ನಿಲ್ಲುವಂತೆ ಮಾಡಿದ್ದಾನೆ. ನಮ್ಮ
ಮೂವರ ಸಾವಿಗೂ ಉಲ್ಲಾಸ್ ಗೌಡನೆ ಕಾರಣನೆಂದು ಡೆತ್ ನೋಟ್ ನಲ್ಲಿ ಉಲ್ಲೇಖವಾಗಿದ್ದು, ಸ್ಥಳಕ್ಕೆ ನರಸೀಪುರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Banner Ad