Banner Ad

ಸುದ್ದಿ ಕನ್ನಡ ವಾರ್ತೆ

ಶಿರಸಿ: ನಾಡದೇವಿ ಶಿರಸಿಯ ಶ್ರೀ ಮಾರಿಕಾಂಬಾ ದೇವಸ್ಥಾನದ ನೂತನ ಆಡಳಿತ ಮಂಡಳಿಗೆ ನಿವೃತ್ತ ಖಜಾನೆ ಅಧಿಕಾರಿ ರವಿ ಬೆಳ್ಳಿಮನೆ ಹಾಗೂ ಉಪಾಧ್ಯಕ್ಷರಾಗಿ ಕೆಡಿಸಿಸಿ ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಅಶೋಕ ಪವಾರ್ ಆಯ್ಕೆಯಾಗಿದ್ದಾರೆ.

Banner Ad

ಇನ್ನುಳಿದಂತೆ ಧರ್ಮದರ್ಶಿಗಳಾಗಿ ಸಮೃದ್ದಿ ಮಹಿಳಾ ಮಂಡಳದ ಅಧ್ಯಕ್ಷೆ ಅರ್ಚನಾ ರಾಘವೇಂದ್ರ ಹೊನ್ನಾವರ, ನಿವೃತ್ತ ಇಂಜಿನಿಯರ್ ವಿನಾಯಕ ಎಸ್ ಶೇಟ್ ಹಾಗು ಮಾಜಿ ಸೈನಿಕ ಕೇಶವ ಜಿ ಹೆಗಡೆ ಅಬ್ರಿಮನೆ ಆಯ್ಕೆಯಾಗಿದ್ದಾರೆ.

ಮುಂದಿನ ಐದು ವರ್ಷಗಳ ಕಾಲ ನೂತನವಾಗಿ ಆಯ್ಕೆಯಾದ ಎಲ್ಲ ಐದೂ ಧರ್ಮದರ್ಶಿಗಳಿಗೆ ಜಿಲ್ಲಾ ನ್ಯಾಯಧೀಶರು ಪ್ರಮಾಣ ವಚನ ಬೋದಿಸಿದರು. ಬಳಿಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಒಮ್ಮತದಲ್ಲಿ ನಡೆಯಿತು.

Banner Ad