Banner Ad

ಸುದ್ಧಿಕನ್ನಡ ವಾರ್ತೆ
ಪಣಜಿ: ಗೋವಾದಿಂದ ಅಪಹರಿಸಲ್ಪಟ್ಟಿದ್ದ ಅಪ್ರಾಪ್ತ ಬಾಲಕಿಯನ್ನು ಗೋವಾದ ಕೆಫೆಮ್ ಪೋಲೀಸರು ಕರ್ನಾಟಕದ ಅರಸೀಕೆರೆ ವ್ಯಾಪ್ತಿಯಲ್ಲಿ ಪತ್ತೆಮಾಡಿ ಗೋವಾ ಪೋಲಿಸರು ವಷಕ್ಕೆ ಪಡೆದಿದ್ದು, ಶನಿವಾರ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ನಂತರ ಗೋವಾ ಪೋಲಿಸರು ಬಾಲಕಿಯನ್ನು ಆಕೆಯ ಕುಟುಂಬಕ್ಕೆ ಒಪ್ಪಿಸಿದ್ದಾರೆ. ಆದರೆ ಅಪಹರಣ ಮಾಡಿದ ಆರೋಪಿಗಾಗಿ ಪೋಲಿಸರು ಶೋಧಕಾರ್ಯ ಕೈಗೆತ್ತಿಕೊಂಡಿದ್ದಾರೆ.

 

Banner Ad

ಅಪ್ರಾಪ್ತ ಬಾಲಕಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಾದ ತಕ್ಷಣ ಗೋವಾ ಪೋಲಿಸರು ಅಪಹರಣ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ಬಾಲಕಿಯನ್ನು ಹುಡುಕಲು ಪೋಲಿಸರು ಆಧುನಿಕ ಮಾಹಿತ ಸಂಗ್ರಹ ವಿಧಾನಗಳು ಹಾಗೂ ಸಾಂಪ್ರದಾಯಿಕ ತನಿಖಾ ತಂತ್ರಗಳನ್ನು ಬಳಸಿದರು. ಈ ಮೂಲಕ ಪಡೆದ ಪ್ರಮುಖ ಮಾಹಿತಿಯ ಆಧಾರದ ಮೇಲೆ ಗೋವಾ ಪೋಲಿಸರು ಅರಸಿಕೆರೆಗೆ ತೆರಳಿದರು. ಪೋಲಿಸರು ತಮ್ಮೊಂದಿಗ ಬಾಲಕಿಯ ಕುಟುಂಬದ ಒಂಬ ಸದಸ್ಯರನ್ನೂ ಕರೆದೊಯ್ದಿದ್ದರು.

 

ಗೋವಾ ಪೋಲಿಸರು ಮೊದಲು ಹುಬ್ಬಳ್ಳಿಗೆ ತೆರಳಿ ಅಗತ್ಯ ಮಾಹಿತಿ ಸಂಗ್ರಹಿಸಿ ರೈಲ್ವೆ ನಿಲ್ದಾಣದಲ್ಲಿ ವ್ಯಾಪಾರಿಗಳ ಸಹಾಯದಿಂದ ಬಾಲಕಿಯನ್ನು ಹುಡುಕಲು ತಂತ್ರ ರೂಪಿಸಲಾಯಿತು. ಈ ಬಾಲಕಯ ಛಾಯಾಚಿತ್ರವನ್ನು ಹುಬ್ಬಳ್ಳಿಯಿಂದ ಮೈಸೂರು ಮಾರ್ಗದಲ್ಲಿರುವ ವಿವಿಧ ರೈಲು ನಿಲ್ದಾಣಗಳಿಗೆ ಸಂಬಂಧಿಸಿದ ವ್ಯಾಪಾರಿಗಳಿಗೆ ಕಳುಹಿಸಲಾಯಿತು. ನಂತರ ಕರ್ನಾಟಕದ ಅರಸೀಕೆರೆ ವ್ಯಾಪ್ತಿಯಲ್ಲಿ ಬಾಲಕಿ ಪತ್ತೆಯಾದಳು.

ಗೋವಾ ಪೋಲಿಸರು ಮತ್ತು ಕರ್ನಾಟಕ ಪೋಲಿಸರ ಸಮನ್ವಯ ಮತ್ತು ಸ್ಥಳೀಯ ನಾಗರೀಕರ ಸಹಕಾರದಿಂದ ಈ ಪ್ರಕರಣದ ಯಶಸ್ವಿ ತನಿಖೆ ಸಾಧ್ಯವಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ಹೆಚ್ಚಿನ ತನಿಖಾ ಕಾರ್ಯ ಕೈಗತ್ತಿಕೊಂಡಿದ್ದಾರೆ.

 

Banner Ad