Banner Ad

ಸುದ್ದಿ ಕನ್ನಡ ವಾರ್ತೆ

ಜೋಯಿಡಾ:ತಾಲೂಕಿನ ಶುಕ್ರವಾರ ದಿನಾಂಕ: 13.03.2026 ರಂದು ಸರಕಾರಿ ಪ್ರೌಢಶಾಲೆ ಬಾಪೇಲಿಕ್ರಾಸ್ ನಲ್ಲಿ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಹಾಗೂ ವರ್ಗಾವಣೆಗೊಂಡ ಶಿಕ್ಷಕರ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ಎಸ್. ಡಿ..ಎಂ.ಸಿ. ಅಧ್ಯಕ್ಷರಾದ ಶ್ರೀ ಮೋಹನ ಮಾವಸ್ಕರ್, ಉಪಾಧ್ಯಕ್ಷರಾದ ರವಿಕಲಾ ಗಾಳಕರ, ಸದಸ್ಯರಾದ ಶ್ರೀ ಸುರೇಶ ಗೋಕಾಳಕರ, ಗ್ರಾಮ ಪಂಚಾಯತ ಮಾಜಿ ಸದಸ್ಯೆ ಶ್ರೀಮತಿ ನಾಗವ್ವಾ ಹಾಗೂ ವರ್ಗಾವಣೆಗೊಂಡ ಶಿಕ್ಷಕರುಗಳಾದ ಶ್ರೀಮತಿ ಮಾರ್ಗರೇಟ್ ಫುರ್ತಾಡೊ, ಶ್ರೀ ಅಬ್ದುಲ್ ರಶೀದ ಗನಿ, ಶ್ರೀ ಶಿವಾನಂದ ಕೆ. ಹೆಚ್. ಸರ್ ಹಾಗೂ ಅತಿಥಿಗಳಾಗಿ ಆಗಮಿಸಿದ ಶ್ರೀ ಪ್ರಕಾಶ ಜಾಲಿಬೇರಿ, ಶ್ರೀ ಗೋವಿಂದ ಅಂಬಿಗ ಸರ್ ಹಾಗೂ ಶಾಲೆಯ ಮುಖ್ಯ ಶಿಕ್ಷಕರಾದ ಶ್ರೀ ಶ್ರೀಕಾಂತ ಚಲವಾದಿ ಸರ್, ಉಳಿದ ಶಿಕ್ಷಕ ವೃಂದದವರು, ಹಾಗೂ ಸ. ಪ್ರಾ. ಶಾಲೆ ಬಾಪೇಲಿಕ್ರಾಸ್ ನ ಶಿಕ್ಷಕಿಯಾದ ಶ್ರೀಮತಿ ಕಾಂಚನಾ ಮೇಡಂ, ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Banner Ad

ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು,ಆಗಮಿಸಿದ ಸರ್ವರನ್ನು ಸಮಾಜ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ನಿಕಿತಾ ಮೇಡಂರವರು ಸ್ವಾಗತಿಸಿದರು. ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಲಾಯಿತು.ತದನಂತರದಲ್ಲಿ
2025 ರ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವರ್ಗಾವಣೆಗೊಂಡ ಶಿಕ್ಷಕರುಗಳನ್ನು ಸನ್ಮಾನಿಸಲಾಯಿತು. ಸನ್ಮಾನಿತ ಶಿಕ್ಷಕರು, ಅತಿಥಿಗಳು, ಸ. ಪ್ರಾ. ಶಾಲೆ ಬಾಪೇಲಿಕ್ರಾಸ್ ನ ಶಿಕ್ಷಕಿಯಾದ ಶ್ರೀಮತಿ ಕಾಂಚನಾ ಮೇಡಂ, ಹಾಗೂ ಎಲ್ಲಾ ಶಿಕ್ಷಕ ವೃಂದದವರು ಅನಿಸಿಕೆಗಳನ್ನು ವ್ಯಕ್ತಪಡಿಸಿ, ತಮ್ಮ ವೃತ್ತಿ ಜೀವನದ ಸವಿ ನೆನಪುಗಳನ್ನು ಎಲ್ಲರೊಂದಿಗೆ ಹಂಚಿಕೊಂಡರು ಹಾಗೂ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ವಾರ್ಷಿಕ ಪರೀಕ್ಷೆಗೆ ಶುಭ ಹಾರೈಸಿ, ಶಾಲೆಗೆ ಉತ್ತಮ ಫಲಿತಾಂಶವನ್ನು ತಂದುಕೊಡುವುದಾಗಿ ವಿದ್ಯಾರ್ಥಿಗಳಿಗೆ ತಿಳಿಸಿದರು. ಕನ್ನಡ ಶಿಕ್ಷಕಿಯಾದ ಶ್ರೀಮತಿ ಕವಿತಾ ಕುಂಬಾರಕರ ಮೇಡಂ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಸಲ್ಮಾ ಮೇಡಂರವರು ವಂದಿಸಿದರು. ಶಿಕ್ಷಕರಾದ ಕುಮಾರ ಭಗವಾನ್ ಸಿಂಧೆ ಹಾಗೂ ಶ್ರೀಮತಿ ಪರವೀನ ಮುಲ್ಲಾ ಮೇಡಂರವರು ಸಹಕರಿಸಿದರು.

Banner Ad