Banner Ad

ಸುದ್ದಿ ಕನ್ನಡ ವಾರ್ತೆ
ಕಾರವಾರ: ಗಲ್ಫ್ ರಾಷ್ಟ್ರಗಳಲ್ಲಿನ ಪ್ರಕ್ಷುಬ್ಧ ಪರಿಸ್ಥಿತಿಯ ನಡುವೆಯೂ ಯುಎಇಯಿಂದ ಬಿಟುಮಿನ್ ಹೊತ್ತ ಬೃಹತ್ ಹಡಗೊಂದು ಶುಕ್ರವಾರ ಕಾರವಾರ ಬಂದರಿಗೆ ಯಶಸ್ವಿಯಾಗಿ ಆಗಮಿಸಿದೆ.

ಯುಎಇಯ ಕೋರ್ಫಕಾನ್ ಬಂದರಿನಿಂದ ಮಾರ್ಚ್ 3ರಂದು ಹೊರಟಿದ್ದ ‘ಚೆಂಗ್ ಎಕ್ಸ್’ ಹೆಸರಿನ ಈ ಹಡಗು, ಸುಮಾರು 5,500 ಟನ್‌ ಸಾಮರ್ಥ್ಯ ಹೊಂದಿದೆ.
ಪ್ರಸ್ತುತ ಈ ಹಡಗಿನಲ್ಲಿ 3,100 ಟನ್ ಬಿಟುಮಿನ್ ಅನ್ನು ಕಾರವಾರಕ್ಕೆ ಸಾಗಿಸಲಾಗಿದೆ.

Banner Ad

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದ ನಂತರ ಯುಎಇಯಿಂದ ಕಾರವಾರಕ್ಕೆ ಆಗಮಿಸಿದ ಮೊದಲ ಹಡಗು ಇದಾಗಿದೆ ಎಂಬುದು ವಿಶೇಷ. ಇತ್ತೀಚಿನ ದಿನಗಳಲ್ಲಿ ಇರಾನ್‌ನಿಂದ ನಿರ್ಬಂದಕ್ಕೊಳಗಾಗಿದ್ದ ಮತ್ತು ಜಾಗತಿಕವಾಗಿ ಅತ್ಯಂತ ಸೂಕ್ಷ್ಮ
ಎನಿಸಿರುವ ‘ಹರ್ಮೋಜ್ ಜಲಸಂಧಿ’ ಮಾರ್ಗವಾಗಿಯೇ ಈ ಹಡಗು ಸುರಕ್ಷಿತವಾಗಿ ಭಾರತಕ್ಕೆ ಬಂದು ತಲುಪಿದೆ.
ಬಂದರಿನಲ್ಲಿ ಬಿಟುಮಿನ್ ಇಳಿಸುವ ಪ್ರಕ್ರಿಯೆ ಪೂರ್ಣಗೊಂಡಿದ್ದು, ಹಡಗು ಇಂದು ಸಂಜೆ ಕಾರವಾರದಿಂದ ವಾಪಸ್ ಪ್ರಯಾಣ ಬೆಳೆಸಲಿದೆ. ಕಾರವಾರದಿಂದ ನಿರ್ಗಮಿಸಿದ ನಂತರ ಹಡಗು ಮುಂದಿನ ಯಾವ ಬಂದರಿಗೆ ತೆರಳಲಿದೆಎಂಬುದು ಇನ್ನೂ ಅಧಿಕೃತವಾಗಿ ತಿಳಿದುಬಂದಿಲ್ಲ ಎಂದು ಹಡಗಿನ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಅಂತರಾಷ್ಟ್ರೀಯ ಸಾಗರ ಮಾರ್ಗದಲ್ಲಿನ ಅನಿಶ್ಚಿತತೆಯ ನಡುವೆಯೂ ಕಾರವಾರ ಬಂದರಿಗೆ ಸರಕು ಸಾಗಣೆ ಹಡಗು ಬಂದಿರುವುದು ವಾಣಿಜ್ಯ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿದೆ.

Banner Ad