Banner Ad

ಸುದ್ದಿ ಕನ್ನಡ ವಾರ್ತೆ
ಜೋಯಿಡಾ ತಾಲೂಕಿನ ಅವೇಡಾದಿಂದ – ಬಾಡಗುಂದ ಗ್ರಾಮಕ್ಕೆ ಲೋಕೋಪಯೋಗಿ ಇಲಾಕೆ 2 ಕೋಟಿ ಅನುದಾನದಲ್ಲಿ ಕಾಂಕ್ರೀಟ್ ನ ಹೊಸ ರಸ್ತೆ ನಿರ್ಮಾಣ ಮಾಡಿದೆ ಕಾಮಗಾರಿ ಪೂರ್ಣಗೊಳಿಸದೆ ಗುತ್ತಿಗೆದಾರ ಕೆಲಸ ಮುಗಿದಿದೆ ಎನ್ನುತ್ತಿರುವುದು ಗ್ರಾಮಸ್ಥರಿಗೆ ಬೇಸರ ಮೂಡಿಸಿದೆ.

ಶಾಸಕ ಆರ್ ವಿ ದೇಶಪಾಂಡೆ ಅವರು ಈ ಭಾಗದಲ್ಲಿ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ ಎನ್ನುವ ಉದ್ದೇಶದಿಂದ ಉತ್ತಮವಾದ ಕಾಂಕ್ರೀಟ್ ರಸ್ತೆ ನಿರ್ಮಾಣ ಆಗಲಿ ಎನ್ನುವ ಉದ್ದೇಶದಿಂದ ರಸ್ತೆಗೆ ಅನುದಾನ ತಂದಿದ್ದರು, ಆದರೆ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ಕಾಮಗಾರಿ ಸರಿಯಾಗಿ ಆಗಿಲ್ಲ ಎಂಬುದು ಗ್ರಾಮಸ್ಥರ ಮಾತಾಗಿದೆ.

Banner Ad

ಕಾಂಕ್ರೀಟ್ ರಸ್ತೆಯ ಎರಡು ಬದಿಯಲ್ಲಿಯೂ ಮಣ್ಣು ಹಾಕಿಲ್ಲ, ಇದರಿಂದ ವಾಹನಗಳು ಎದುರು ಬಂದಾಗ ಸಮಸ್ಯೆ ಆಗುತ್ತದೆ, ಅಲ್ಲದೆ ರಾತ್ರಿ ವೇಳೆಯಲ್ಲಿ ರಸ್ತೆ ಅಂಚಿನಲ್ಲಿ ಕಾಣುವ ರಿಪ್ಲೇಕ್ಟರ್ ಅಳವಡಿಸಿಲ್ಲ, ಬಣ್ಣ ಹಚ್ಚಿಲ್ಲ, ಕೆಲ ಕಡೆಗಳಲ್ಲಿ ಅರ್ಧ ಹಂಪಗಳನ್ನು ಹಾಕಲಾಗಿದೆ,ಅಲ್ಲದೇ ಅವೇಡಾ ಗ್ರಾಮ ಪಂಚಾಯತನಿಂದ ಹಾಕಲಾದ ಬೋರ್ಡ್ ಗಳನ್ನು ಒಡೆಯಲಾಗಿದೆ.
ಈ ಬಗ್ಗೆ ಲೋಕೋಪಯೋಗಿ ಇಲಾಕೆ ಅಧಿಕಾರಿಗಳು ಗಮನಹರಿಸಿಲ್ಲ, ಗುತ್ತಿಗೆದಾರನಿಗೆ ಕೆಲಸದ ಬಗ್ಗೆ ಕಾಳಜಿಯೇ ಇಲ್ಲ ಕೂಡಲೇ ಎಲ್ಲಾ ಕೆಲಸಗಳನ್ನು ಮಾಡಿ ಉತ್ತಮವಾದ ರಸ್ತೆ ನಮಗೆ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸ್ಥಳೀಯ ಸಾರ್ವಜನಿಕರು ಮುಖ್ಯಸ್ಥರು. ಹೇಳುವಂತೆ
ಶಾಸಕರು ನಮ್ಮ ಗ್ರಾಮಕ್ಕೆ ಉತ್ತಮವಾದ ರಸ್ತೆ ಆಗಲಿ ಎಂದು ಕೋಟಿಗಟ್ಟಲೇ ಅನುದಾನ ನೀಡಿದರು, ಆದರೆ ಗುತ್ತಿದಾರ ಮತ್ತು ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಸರಿಯಾಗಿ ಆಗಿಲ್ಲ, ಕೂಡಲೇ ರಸ್ತೆ ಎಲ್ಲಾ ಸಣ್ಣ ಪುಟ್ಟ ಕೆಲಸಗಳನ್ನು ಮುಗಿಸಿ ಉತ್ತಮ ರಸ್ತೆ ನಮಗೆ ನೀಡಲಿ ಎನ್ನುತ್ತಿದ್ದಾರೆ.

Banner Ad