Banner Ad

ಸುದ್ದಿ ಕನ್ನಡ ವಾರ್ತೆ

ಚಿಕ್ಕಮಗಳೂರು: ತಂದೆ ಬೈದರು ಎಂಬ ಕ್ಷುಲ್ಲಕ ಕಾರಣಕ್ಕೆ ಅವಿವಾಹಿತೆ ಯುವತಿಯೋರ್ವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.

Banner Ad

ಸೌಜನ್ಯ ಪೂಜಾರಿ (22) ನೇಣಿಗೆ ಶರಣಾದ ಯುವತಿ. ಸೌಜನ್ಯ ಅವರ ತಂದೆ ನಟೇಶ್ ಪೂಜಾರಿ ಅಲಿಯಾಜ್ ಗೋಪಾಲ ಅವರು, ಶನಿವಾರ ಬೆಳಗ್ಗೆ ತರಕಾರಿ ತಂದು ಮಗಳು ಸೌಜನ್ಯ ಅವರಿಗೆ ಸಾಂಬಾರು ಮಾಡುವಂತೆ ತಿಳಿಸಿ ಹೊರ ಹೋಗಿದ್ದರು. ಮಧ್ಯಾಹ್ನ 2 ಗಂಟೆಗೆ ಮನೆಗೆ ವಾಪಾಸು ಬಂದಾಗ ಸಾಂಬಾರು ಮಾಡಿಲ್ಲವೆಂಬ ಕಾರಣಕ್ಕೆ ಮಗಳಿಗೆ ಬೈದು ಪಕ್ಕದ ಮನೆಯಿಂದ ಸಾಂಬಾರ್ ತರಲು ತೆರಳಿದ್ದಾರೆ. ಈ ಸಮಯದಲ್ಲಿ ಸೌಜನ್ಯ ಮನೆ ಬಾಗಿಲು ಹಾಕಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಟ್ಟಣದ ಎಂಜಿಎಂ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆ ಕುರಿತು ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Banner Ad