Banner Ad

ಸುದ್ದಿ ಕನ್ನಡ ವಾರ್ತೆ

ಬೈಲಹೊಂಗಲ: ಸಮೀಪದ ಬೈಲವಾಡ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ವಿವಿದೋದ್ಯೇಶ ಸಹಕಾರಿ ಸಂಘದ ಶ್ರೀ ಭುವನೇಶ್ವರಿ ಸ್ವ ಸಹಾಯ ಸಂಘ ಉದ್ಘಾಟಿಸಲಾಯಿತು.

Banner Ad

ಸಂಘ, ಸಂಸ್ಥೆಗಳು ಹಾಗೂ ಇಂತ ಸಹಕಾರಿಗಳು ಇವತ್ತಿನ ದಿನ ಮಾನಗಳಲ್ಲಿ ಪ್ರತಿ ತಿಂಗಳು ಉಳಿತಾಯ ಮಾಡಿ ಹೂಡಿಕೆ ಮಾಡಿದವರಿಗೆ ಕಷ್ಟಕರ ಕಾಲದಲ್ಲಿ ಕಂಡಿತಾ ಕೈ ಹಿಡಿಯುತ್ತವೆ ಎಂದು ಕನ್ನಡ ಪರ ಹೋರಾಟಗಾರ, ಸಾಹಿತಿ, ಗಾಯಕ, ಸಮಾಜಸೇವಕ ಶ್ರೀ ಮಹಾಂತೇಶ ಶಿವಪ್ಪ ಮುದಕನಗೌಡರ ಅವರು ಹೇಳಿದರು.
ಬೈಲವಾಡ ಗ್ರಾಮದಲ್ಲಿ ಶ್ರೀ ಭುವನೇಶ್ವರಿ ಸ್ವ ಸಹಾಯ ಸಂಘ ಉದ್ಘಾಟನೆ ಮಾಡುತ್ತಾ ಅವರು ಹೇಳಿದರು.
ನಂತರ ಶ್ರೀ ಭುವನೇಶ್ವರಿ ವಿವಿಧೋದ್ದೇಶ ಸಹಕಾರಿ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯರಾಗಿ ಮಹಾಂತೇಶ ಮುದಕನಗೌಡರ, ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಮುದಕನಗೌಡರ, ಗೌರವ ಅಧ್ಯಕ್ಷರಾಗಿ ಸಿದ್ದನಗೌಡ ಪಾಟೀಲ, ಸಂಘಟನಾ ಕಾರ್ಯದರ್ಶಿ ಸಚಿನ್ ಬೆಣ್ಣಿ, ಕಾರ್ಯದರ್ಶಿ ಸಂತೋಷ್ ಮುದಕನಗೌಡರ, ಖಜಾಂಚಿ ವಿಠಲ್ ಮದನಳ್ಳಿ, ಸಂಚಾಲಕ ನವೀನ್ ಪುಡೂರ, ರುದ್ರಗೌಡ ಪಾಟೀಲ್ ಪ್ರವರ್ತಕರು, ಹಾಗೂ ಸಿಪಾಯಿಯಾಗಿ ದುಂಡಪ್ಪ ಹುಚ್ಚನವರ ಆಯ್ಕೆಯಾದರು.
ಚೇತನ ಬೆಣ್ಣಿ ಪದಾಧಿಕಾರಿಗಳನ್ನು ಸ್ವಾಗತಿಸಿದರು, ರಾಜು ಮದನಳ್ಳಿ ನಿರೂಪಿಸಿದರು, ಓಂಕಾರ್ ಮುದಕನಗೌಡರ ವಂದಿಸಿದರು.

Banner Ad