Banner Ad

ಸುದ್ದಿ ಕನ್ನಡ ವಾರ್ತೆ

ಅಂಕೋಲಾ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಪರಿಸ್ಥಿತಿ ಹೀಗೇಕೆ..? ಇಂತದ್ದೊಂದು ಪ್ರಶ್ನೆ ಈ ಹೆದ್ದಾರಿಯಲ್ಲಿ ಓಡಾಟ ನಡೆಸುವವರಿಗೆ ಮನದಲ್ಲಿ ಮೂಡಿರಲೇಬೇಕು.

Banner Ad

ಹೌದು.. ಬೇರೆಯಲ್ಲೂ ಇರದ ದಯನೀಯ ಸ್ಥಿತಿಗೆ ಅಂಕೋಲಾ ಹುಬ್ಬಳ್ಳಿ ಮಾರ್ಗದ ಹೆದ್ದಾರಿ ಬಂದು ತಲುಪಿದೆ. ಅದರಲ್ಲೂ ಬಹು ಮುಖ್ಯವಾಗಿ ಅಂಕೋಲಾದ ಬಾಳೆಗುಳಿ ಕ್ರಾಸ್ ನಿಂದ ಮಾಸ್ತಿ ಕಟ್ಟೆ ವರೆಗಂತು ಹೆದ್ದಾರಿ ತುಂಬೆಲ್ಲಾ ಪೂರ್ತಿ ಹೊಂಡಗಳೇ ಆಗಿವೆ. ಇವು ಅಂತಿಂಥ ಹೋಂಡ ಗಳಲ್ಲ , ಈ ಹೊಂಡಕ್ಕೆ ವಾಹನ ಇಳಿದರೆ ಕಥೆ ಮುಗಿಯಿತು, ಅಷ್ಟು ಭೀಕರ ಪರಿಸ್ಥಿತಿ ಇದೆ.

ಬಾಳೆಗುಳಿ ಕ್ರಾಸ್ ನಿಂದ ಯಲ್ಲಾಪುರಕ್ಕೆ ತೆರಳಬೇಕಾದರೆ ಹರಸಾಹಸ ಪಡಬೇಕು. ಒಂದು ಹೊಂಡ ತಪ್ಪಿಸಲು ಹೋದರೆ 4 ಹೊಂಡದಲ್ಲಿ  ವಾಹನ ಇಳಿಯುತ್ತದೆ. ಇಂತಹ ದುಸ್ಥಿತಿ ಇದ್ದರೂ ಕೂಡ ಹೆದ್ದಾರಿ ಮಾತ್ರ ಏಕೆ ದುರಸ್ತಿ ಆಗುತ್ತಿಲ್ಲ….. ಜನಪ್ರತಿನಿಧಿಗಳಿಗೆ , ಸರ್ಕಾರಕ್ಕೆ ಈ ರಸ್ತೆ ಮಾತ್ರ ಕಾಣುವುದಿಲ್ಲವೇ….? ಎಂದು ಈ ಮಾರ್ಗದಲ್ಲಿ ಓಡಾಟ ನಡೆಸುವ ವಾಹನ ಸವಾರರು ಕೇಳುವಂತಾಗಿದೆ. ಈ ಹೊಂಡಕ್ಕೆ ಹೆದರಿಯೇ ಹಲವು ವಾಹನ ಸವಾರರು ಸುತ್ತುಗಟ್ಟಿ ಬೇರೆ ಮಾರ್ಗ ಹುಡುಕಿಕೊಂಡು ಹೋಗುತ್ತಿದ್ದಾರೆ. ಇಷ್ಟೊಂದು ಭೀಕರತೆ ಇದೆ.

ಕಳೆದ ವರ್ಷ ಕೂಡ ಇದಕ್ಕಿಂತ ಗಂಭೀರ ಸ್ಥಿತಿ ಗೆ ಈ ಹೆದ್ದಾರಿ ತಲುಪಿತ್ತು. ಆದರೆ ನಂತರ ಯಲ್ಲಾಪುರ ಜಾತ್ರೆಯ ಸಂದರ್ಭದಲ್ಲಿ ಹೆದ್ದಾರಿ ಪೇಜ್ ವರ್ಕ್ ಮಾಡಲಾಗಿತ್ತು. ಆದರೆ ಮತ್ತೆ ಅದೇ ಸ್ಥಿತಿಗೆ ಇದೀಗ ಈ ಹೆದ್ದಾರಿ  ಬಂದು ತಲುಪಿದೆ. ಕಳೆದ ಬಾರಿ ಹತ್ತಾರು ವಾಹನಗಳು ಈ ಹೊಂಡಗಳಿಂದಾಗಿಯೇ ಅಪಘಾತಕೀಡಾಗಿದ್ದವು.

ಇದೀಗ ಈ ಹೆದ್ದಾರಿಯ ಸ್ಥಿತಿ ಮತ್ತೆ ಗಂಭೀರತೆಗೆ ತಲುಪಿದೆ. ಪ್ರತಿದಿನ ಈ ಮಾರ್ಗದಲ್ಲಿ ಅದೆಷ್ಟೋ ವಾಹನಗಳು ಕೆಟ್ಟು ನಿಲ್ಲುತ್ತಿವೆ. ಹಲವು ಅಪಘಾತಗಳಿಗೆ ಈ ಹೆದ್ದಾರಿ ಹೊಂಡಗಳೇ ಕಾರಣವಾಗಿವೆ. ಕೆಲ ಸೇತುವೆ ಭಾಗದಲ್ಲಂತೂ ರಸ್ತೆ ಸಂಪೂರ್ಣ ಕಿತ್ತು ಹೋಗಿ ಸೇತುವೆಯ ರಾಡ್ಗಳು ಕಾಣುತ್ತಿವೆ. ಇಲ್ಲಿ ಸಂಭವಿಸುವ ಅಪಘಾತಕ್ಕೆ ಸರ್ಕಾರ ಹೊಣೆ ಹೊತ್ತುಕೊಳ್ಳಲಿದೆಯೇ…? ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.

ಜನರ ಜೀವದ ಬಗ್ಗೆ ಇಷ್ಟೊಂದು ನಿಷ್ಕಾಳಜಿ ಏಕೆ….? ಜನಪ್ರತಿನಿಧಿಗಳು ಕಣ್ಣು ಮುಚ್ಚಿ ಓಡಾಟ ನಡೆಸುತ್ತಿದ್ದಾರೆಯೇ…? ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಲಿದೆಯೇ….? ಕಾದುನೋಡಬೇಕಿದೆ.…

Banner Ad