Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ನದಿಯಲ್ಲಿ ಮೊಸಳೆ , ಕಾಡಿನಲ್ಲಿ ಚಿರತೆ ಹುಲಿ ಗಳಿರದೆ ಪಟ್ಟಣದಲ್ಲಿ ಇರಲು ಸಾಧ್ಯವೇ? ಎಂದು ಪರಿಸರ ಪ್ರೇಮಿಯೊಬ್ಬರು ಮಾಧ್ಯಮದವರಿಗೆ ಕೇಳಿದ್ದಾರೆ.

Banner Ad

ದಿನಕ್ಕೊಬ್ಬ ವರದಿಗಾರ , ಕಾಳಿ ನದಿಯಲ್ಲಿ ಮೊಸಳೆ ಇದೆ, ಮೊಸಳೆ ಪಾರ್ಕಿನಿಂದ ಮೊಸಳೆ ಮೇಲೆ ಬಂದಿದೆ, ಚಿರತೆ , ಕಾಡಿನ ರಸ್ತೆಯಲ್ಲಿ ರಾತ್ರಿ ಓಡಾಡುವವರಿಗೆ ಕಂಡಿದೆ , ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ , ಹೆಬ್ಬಾವು ರೈತರ ತೋಟದ ಪಕ್ಕದಲ್ಲಿ ಬಂದಿದೆ, ಹೀಗೆ ವಿವಿಧ ರೀತಿಯ ಸುದ್ದಿ ಮಾಡುತ್ತಾರೆ. ಆದರೆ ಅವುಗಳ ವಾಸ ಸ್ಥಾನಗಳಲ್ಲಿ ಜನರು ಹೋಗುವುದು ಅರಣ್ಯದಲ್ಲಿ ರೆಸಾರ್ಟ್ ಮಾಡಿ ರೆಸಾರ್ಟ್ ಗೆ ಹುಲಿ ಹೆಸರಿಟ್ಟು ಹುಲಿ ಬಂದಿದೆ ಅನ್ನುವುದು ಯಾಕೆ? ಪ್ರವಾಸಿಗರನ್ನು ಸೆಳೆಯಲು ಹುಲಿ ಹೆಸರು ಬೇಕು ಅಕ್ಕ ಪಕ್ಕ ಹುಲಿ ಓಡಾಡ ಬಾರದು ಎಂದರೆ ಹೇಗೆ ಎಂದಿದ್ದಾರೆ.

ಅಷ್ಟೇ ಅಲ್ಲ ಕಾಡಿನಲ್ಲಿ ರೆಸಾರ್ಟ್ ಮಾಡಲು ಪರವಾನಿಗೆ ಕೊಡುವ ಸರಕಾರಕ್ಕೆ , ಅರಣ್ಯ ಇಲಾಖೆಗೆ ಯಾಕೆ ನೀವು ಕೇಳುತ್ತಿಲ್ಲ, ಎಂದು ಹೇಳುತ್ತಾ, ಪರವಾನಿಗೆ ಇಲ್ಲದ ಅನೇಕ ರೆಸಾರ್ಟ್, ಗಳಿಗೆ ಹೋಮ್ ಸ್ಟೇ ಗಳಿಗೆ ಪತ್ರಕರ್ತರು ಹೋಗಿ ಬರ್ತೀರಲ್ಲ ನಿಮಗೆ ಅದು ಸರಿ ಅನಿಸುತ್ತಿದೆಯಾ ? ಆನೆ ಇದೆ ಎಂದು ಆನೆ ಕಾರಿಡಾರ್ ಮೊಸಳೆ ಇದೆ ಎಂದು ಮೊಸಳೆ ಪಾರ್ಕ್ ಮಾಡಿದ ಮೇಲೆ ಅಲ್ಲಿ ಹೋಗಿ ಸಾಯುವ ಸ್ಥಿತಿ ಯಾಕೆ ಜನ ತಂದುಕೊಳ್ಳಬೇಕು ಜಲಚರಗಳಿಗೆ ಬದುಕಲು ಬಿಡಿ, ಅವುಗಳ ಸಂಕುಲ ಬದುಕಲು ಬಿಡಿ, ಅವುಗಳನ್ನು ಬಂಧಿಸಿ ಹಾನಿ ಮಾಡಬಾರದು , ಅವು ಬದುಕಬೇಕು ಅವುಗಳು ಇದ್ದಲ್ಲಿ ಹೋಗಿ ಅವರ ಜೀವಕ್ಕೆ ಕುಂದು ತರುವ ಮೋಜು ಮಸ್ತಿ ಸರಿಯೇ? ಎಂದವರು ಪ್ರಶ್ನಿಸಿದ್ದಾರೆ.

ಅವರ ಹೇಳಿಕೆ ಇಷ್ಟೇ, ಕಾಡುಪ್ರಾಣಿಗಳು ಅವರ ಜಾಗದಲ್ಲಿ ಬದುಕಲು ಬಿಡಿ, ಹಿಂದೆ ಜನರು ಜಾನುವಾರುಗಳು, ಕಾಡು ಪ್ರಾಣಿಗಳು ಪ್ರೀತಿಯಿಂದ ಬದುಕಿ ಬಂದಿದ್ದವು, ಅವುಗಳಿಗೆ ತೊಂದರೆ ಆದರೆ, ಅವು ಕುಡಾ ತೊಂದರೆ ನೀಡುತ್ತವೆ, ಅರಣ್ಯ ಇರುವಲ್ಲಿ ಚಾರಣ ಮಾಡುವುದು ಅವುಗಳ ಸಂತತಿ ಬೆಳವಣಿಗೆಗೆ ತೊಂದರೆ ಆಗುತ್ತದೆ, ನದಿ ಗಳ ಇಕ್ಕೆಲೆ ಗಳಲ್ಲಿ ರೆಸಾರ್ಟ್ ಮಾಡಿದರೆ ಪ್ರಾಣಿಗಳು ನೀರು ಕುಡಿಯಲು ಎಲ್ಲಿ ಹೋಗಬೇಕು, ಅವುಗಳಿಗೆ ಎಂದು ವ್ಯವಸ್ಥೆ ಮಾಡಿದಾಗ, ಅಲ್ಲಿ ನಮಗೇನು ಕೆಲಸ,ಇದರ ಮೇಲೆ ನಿಮ್ಮಿಷ್ಟ, ಎಂದು ಹೇಳಿರುವುದು, ವಿಚಾರಿಸುವಂತಿದೆ.

Banner Ad