ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಭಟ್ರಕೇರಿಯ ಹಿರಿಯ ವೈದಿಕ ಗಣಪತಿ ಭಟ್ಟ ಶುಕ್ರವಾರ ರಾತ್ರಿ ನಿಧನ ಹೊಂದಿದರು.
ಅವರಿಗೆ 75 ವರ್ಷ ವಯಸ್ಸಾಗಿತ್ತು.
ಭಟ್ರಕೇರಿಯ ವೈದಿಕ ಮನೆತನದಲ್ಲಿ ಜನಿಸಿದ ಅವರು,ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಅನೇಕ ಯುವಕರನ್ನು ಕರೆತಂದು, ಶಾಖೆ, ಶಿಕ್ಷಾ ವರ್ಗಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ ಮಾರ್ಗದರ್ಶನ ನೀಡಿದ್ದರು.
