ಸುದ್ದಿ ಕನ್ನಡ ವಾರ್ತೆ
ಯಲ್ಲಾಪುರ: ಯಲ್ಲಾಪುರದಲ್ಲಿ ಬುಧವಾರ ಆಗಸ್ಟ್ ಐದರಂದು ದಿನವಿಡಿ ವಿದ್ಯುತ್ ಇರುವುದಿಲ್ಲ…

ಹೌದು ಇಂದು ಬೆಳಿಗ್ಗೆ 9:00 ಯಿಂದ ಸಂಜೆ 6:00 ವರೆಗೆ ಪಟ್ಟಣದಾದ್ಯಂತ ವಿದ್ಯುತ್ ಸಂಪರ್ಕ ಇರುವುದಿಲ್ಲ ಸಾರ್ವಜನಿಕರು ಹಾಗೂ ಗ್ರಾಹಕರು ಗಮನಿಸಿ ಸಹಕರಿಸಬೇಕೆಂದು ಯಲ್ಲಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಸ್ಕಾಂ ಉಪ ವಿಭಾಗದ ವಿದ್ಯುತ್ ಉಪ ಕೇಂದ್ರದಲ್ಲಿ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುವ ಹಿನ್ನೆಲೆಯಲ್ಲಿ ಆಗಸ್ಟ್ ಐದರಂದು ಬುಧವಾರ ಪಟ್ಟಣದಾದ್ಯಂತ ದಿನವಿಡಿ ವಿದ್ಯುತ್ ಸಂಪರ್ಕ ಕಡಿತಗೊಳ್ಳಲಿದೆ .

ಇದರಿಂದಾಗಿ ಪಟ್ಟಣದಾದ್ಯಂತ ಬೆಳಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ವಿದ್ಯುತ್ ಇರಲ್ಲ……