ಸುದ್ಧಿಕನ್ನಡ ವಾರ್ತೆ
ಪಣಜಿ(ಮಡಗಾಂವ):ಶ್ರೀ ಅಭಿಲಭಾರತ ಹವ್ಯಕ ಮಹಾಸಭಾ (ರಿ) ಇವರ ಆಶ್ರಯದಲ್ಲಿ ಅಗಷ್ಟ 9 ರಂದು ಭಾನುವಾರ ಮಧ್ಯಾನ್ಹ 12 ಗಂಟೆಗೆ ಗೋವಾದ ಮಡಗಾಂವ ಶ್ರೀ ವೀರಶೈವ ಲಿಂಗಾಯತ ಮಠದ ಸಭಾಗೃಹದಲ್ಲಿ ಹವ್ಯಕ ಮಹಿಳಾ ವೇದಿಕೆ ಗೋವಾ ಪ್ರಾಂತ್ಯದ ಉಧ್ಘಾಟನೆ ನೆರವೇರಲಿದೆ.
ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ) ಅಧ್ಯಕ್ಷರಾದ ಡಾ.ಗಿರಿಧರ ಕಜೆ ರವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಧ್ಘಾಟಕರಾಗಿ ಹಿರಿಯ ಸಧ್ಗøಹಿಣಿ ಸುಲೋಚನಾ ಮಹಾಬಲೇಶ್ವರ ಹೆಗಡೆ ರವರು ರವರು ಆಗಮಿಸಲಿದ್ದಾರೆ.
ಹವ್ಯಕ ಮಹಾಸಭಾ (ರಿ) ಆಶ್ರಯದಲ್ಲಿ ಅಗಷ್ಟ 9 ರಂದು ಭಾನುವಾರ ಗೋವಾದ ಮಡಗಾಂವ ಶ್ರೀ ವೀರಶೈವ ಲಿಂಗಾಯತ ಮಠದ ಸಭಾಗೃಹದಲ್ಲಿ ಬೆಳಿಗ್ಗೆ 9.30 ರಿಂದ ಸಂಜೆ 6 ಗಂಟೆಯ ವರೆಗೆ ಗೋವಾ ಪ್ರಾಂತ್ಯ ಹವ್ಯಕ ಪ್ರತಿಭೆಗಳಿಗಾಗಿ ನಡೆಯುವ ಸ್ಫರ್ಧಾ ಸೌರಭ “ಪ್ರತಿಬಿಂಬ” ಕಾರ್ಯಕ್ರಮ ಆಯೋಜಿಸಲಾಗಿದೆ.
ವಯೋಮಿತಿ 6 ವರ್ಷದ ಒಳಗೆ..
1) ಶ್ಲೋಕ ಪಠಣ-ಸಮಯಮಿತಿ 3 ನಿಮಿಷ
2).ಛದ್ಮವೇಷ -ಸಮಯಮಿತಿ 2 ನಿಮಿಷ
3) ಬಣ್ಣ ತುಂಬುವುದು -ಸಮಯಮಿತಿ 1 ತಾಸು
ವಯೋಮಿತಿ 7 ರಿಂದ 12 ವರ್ಷಗಳು..
1). ಭಗವಧ್ಗೀತಾ ಕಂಠಪಾಠ (2 ನೇಯ ಅಧ್ಯಾಯ) ಸಮಯಮಿತಿ 3 ನಿಮಿಷ
2).ಚಿತ್ರಕಲೆ (ವಿಷಯ;ಹವ್ಯಕ ಗ್ರಾಮೀಣ ಬದುಕು) ಸಮಯಮಿತಿ 1 ತಾಸು
3) ಏಕಪಾತ್ರಾಭಿನಯ -ಸಮಯಮಿತಿ 4 ನಿಮಿಷ
ವಯೋಮಿಯಿ 12 ರಿಂದ 18 ವರ್ಷ…
1).ರಸಪ್ರಶ್ನೆ (ಎರಡು ಜನರ ತಂಡ)
ರಾಮಾಯಣ ಮಹಾಭಾರತ ಮತ್ತು ಸಾಮಾನ್ಯ ಜ್ಞಾನ
2). ದೇಶಭಕ್ತಿಗೀತೆ ಸಮಯಮಿತಿ 4 ನಿಮಿಷ.
ಸಾಮಾನ್ಯ ವಿಭಾಗ..(18 ವರ್ಷ ಮೇಲ್ಪಟ್ಟು)
1).ಹವ್ಯಕ ಸಾಂಪ್ರದಾಯ ಗೀತೆಕನಿಷ್ಠ 3, ಗರಿಷ್ಠ 5 ಜನರ ತಂಡ)
ಸಮಯಮಿತಿ 5 ನಿಮಿಷ.
2).ರಂಗೋಲಿ(ಚುಕ್ಕಿ)-ಸಮಯಮಿತಿ 1.5 ತಾಸು
3).ಜಾನಪದ ಗೀತೆ -ಸಮಯಮಿತಿ 4 ನಿಮಿಷ
4).ಹವಿಗನ್ನಡ ಆಶುಭಾಷಣ -ಸಮಯಮಿತಿ 3 ನಿಮಿಷ
5).ಹವಿರುಚಿ; ಹಲ್ವಾ/ಮಣ್ಣಿ
6).ಕರಕುಶಲ ವಸ್ತು ಪ್ರದರ್ಶನ
ಸ್ಫರ್ಧೆ ಮಾಹಿತಿಗಾಗಿ ಸಂಪರ್ಕಿಸಿ;-ರೇಖಾ ಹೆಗಡೆ-9049017373
ಮಹಾಬಲ ಭಟ್ – 9860060373.
ಸೀತಾರಾಮ ಪ.ಭಟ್ (ಪ್ರತಿಬಿಂಬ ಗೋವಾ ಸಂಚಾಲಕರು), ರೇಖಾ ಮಂಜುನಾಥ ಹೆಗಡೆ (ಸಂಚಾಲಕಿ ಪ್ರತಿಬಿಂಬ ಗೋವಾ), ದೀಪಕ್ ಹೆಗಡೆ ಗೋಳಿಕೈ (ಸಂಚಾಲಕರು ಪ್ರತಿಬಿಂಬ ಕೇಂದ್ರ), ಸಿಎ. ವೇಣು ವಿಘ್ನೇಶ ಸಂಪ(ಪ್ರಧಾನ ಕಾರ್ಯದರ್ಶಿ).
ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮೀತಿ ಸದಸ್ಯರು ಶ್ರೀ ಅಖಿಲ ಹವ್ಯಕ ಮಹಾಸಭಾ(ರಿ).
ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಬೆಳಿಗ್ಗೆ ಉಪಹಾರ ಮತ್ತು ಮಧ್ಯಾನ್ಹ ಭೋಜನ ವ್ಯವಸ್ಥೆ ಇರುತ್ತದೆ.
