ಸುದ್ದಿ ಕನ್ನಡ ವಾರ್ತೆ
Goa: ಗೋವಾದ  ಪಣಜಿ ಪೋಂಡ ರಾಷ್ಟ್ರೀಯ ಹೆದ್ದಾರಿಯ ಬೋಮ ಪ್ರದೇಶದಲ್ಲಿ  ಶನಿವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ   ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಈ ಕಾರು ಕರ್ನಾಟಕ ನೋಂದಣಿ ಕ್ರಮಾಂಕ ಹೊಂದಿದೆ.

ಅಪಘಾತದ ನಂತರ ಸ್ಥಳೀಯರು ಹಾಗೂ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು. ಕಾರಿನಲ್ಲಿದ್ದ ಇತರ ನಾಲ್ವರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯನ್ನು ತ್ರಿಲೋಕನಾಥ್ ಹಿರೇಮಠ (ಹೊಸಪೇಟೆ) ಎಂದು ಗುರುತಿಸಲಾಗಿದೆ. ಅಪಘಾತದ ಬಗ್ಗೆ ಮಾರ್ದೋಳ ಪೆÇಲೀಸರು ವಿಚಾರಣೆ ನಡೆಸಿದ್ದಾರೆ; ಅಪಘಾತದ ನಂತರ ಪೆÇೀಂಡಾ-ಪಣಜಿ ರಸ್ತೆಯಲ್ಲಿ ಸಂಚಾರ ಸ್ವಲ್ಪ ಸಮಯದವರೆಗೆ ಅಸ್ತವ್ಯಸ್ತವಾಗಿತ್ತು.

Policeರ ಮಾಹಿತಿಯ ಪ್ರಕಾರ, ಅಪಘಾತಕ್ಕೀಡಾದ ಕಾರಿನಲ್ಲಿದ್ದ ಎಲ್ಲಾ 5 ಜನರು ಕರ್ನಾಟಕ ಹೈಕೋರ್ಟ್‍ನ ಧಾರವಾಡ ಪೀಠದ ನೌಕರರು. ಅವರು ಗೋವಾ ನೋಡಲು ಶುಕ್ರವಾರ ಸಂಜೆ ಬೆಳಗಾವಿಯಿಂದ ಗೋವಾಕ್ಕೆ ಬಂದಿದ್ದರು. ಶುಕ್ರವಾರ ರಾತ್ರಿ  Ponda ಪ್ರದೇಶದಲ್ಲಿ ತಂಗಿದ್ದ ನಂತರ, ಬೆಳಿಗ್ಗೆ ಪಣಜಿಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.