ಸುದ್ದಿ ಕನ್ನಡ
​ಅಂಕೋಲಾ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಕಾರವಾರದಲ್ಲಿ ಸಭೆ ನಡೆಸಿ ವಾಪಸ್ ಆಗುತ್ತಿರುವ ವೇಳೆ ಸಚಿವರ ಎಸ್ಕಾರ್ಟ್ ವಾಹನಕ್ಕೆ ದ್ವಿಚಕ್ರ ವಾಹನವೊಂದು ಬಡಿದು, ದ್ವಿಚಕ್ರ ವಾಹನ ಸವಾರ ಗಾಯಗೊಂಡ ಘಟನೆ ನಡೆದಿದೆ.

​ಅಂಕೋಲಾದ ಅಪೊಲೋ ಫಾರ್ಮಸಿಸ್ಟ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಅಲಗೇರಿಯ ಸಂದೀಪ ನಾಯಕ(40) ಗಾಯಗೊಂಡಿರುವ ವ್ಯಕ್ತಿ.
​ತಾಲೂಕಿನ ಆರ್ಯ ಮೆಡಿಕಲ್ ಸೆಂಟರ್‌ನಲ್ಲಿ ಗಾಯಾಳು ಚಿಕಿತ್ಸೆ ಪಡೆಯುತ್ತಿದ್ದಾನೆ.

​ಸಚಿವ ಯು.ಟಿ. ಖಾದರ್ ಅವರೇ ಈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ತಾಲೂಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಜಗದೀಶ್ ನಾಯ್ಕ ತಪಾಸಣೆ ನಡೆಸಿ, ಚಿಕ್ಕಪುಟ್ಟ ಗಾಯಗಳಾಗಿದ್ದು ಜೀವಕ್ಕೆ ಯಾವುದೇ ಹಾನಿ ಇಲ್ಲ ಎಂದು ತಿಳಿಸಿದ್ದಾರೆ.