Banner Ad

ಸುದ್ದಿ ಕನ್ನಡ ವಾರ್ತೆ

ಜೊಯಿಡಾ:ತಾಲೂಕು ಪಂಚಾಯತ್ ಹಾಗೂ ತಾಲೂಕು ಸ್ವೀಪ್ ಸಮಿತಿ, ಜೋಯಿಡಾ ಇವರ ವತಿಯಿಂದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ–2026 (SIR-2026) ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ವಸತಿ ನಿಲಯ ವಿದ್ಯಾರ್ಥಿನಿಯರಿಂದ ಪತ್ರ ಅಭಿಯಾನ ಕಾರ್ಯಕ್ರಮವನ್ನು ಶನಿವಾರ ಜೋಯಿಡಾ ದಲ್ಲಿ ಆಯೋಜಿಸಲಾಗಿತ್ತು.

Banner Ad

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀಮತಿ ಭಾರತಿ ಎನ್ ಅವರು ಎಸ್‌ಐಆರ್-2026ರ ಮಹತ್ವ ಹಾಗೂ ಪ್ರಕ್ರಿಯೆಯ ಕುರಿತು ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿ, SIR 2026 ಮುದ್ರಿತ ಪೋಸ್ಟ್ ಕಾರ್ಡ್ ಮೂಲಕ ತಮ್ಮ ಪೋಷಕರಿಗೆ ಜಾಗೃತಿ ಸಂದೇಶವನ್ನು ಬರೆದು ರವಾನಿಸುವಂತೆ ಮಾರ್ಗದರ್ಶನ ನೀಡಿದರು.

 

ಅದರಂತೆ 81 ವಿದ್ಯಾರ್ಥಿನಿಯರು ತಮ್ಮ ತಂದೆ-ತಾಯಿಯವರಿಗೆ ಎಸ್‌ಐಆರ್-2026 ಕುರಿತು ಜಾಗೃತಿ ಸಂದೇಶವನ್ನು ಪೋಸ್ಟ್ ಕಾರ್ಡ್ ಮೂಲಕ ಬರೆದು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಜೋಯಿಡಾ ತಾಲೂಕು ಅತ್ಯಂತ ವಿಸ್ತಾರ ವಾಗಿದ್ದು, ಮಳೆಗಾಲದಲ್ಲಿ ಓಡಾಡುವುದು ಮತ್ತು ನೆಟ್ವರ್ಕ್, ವಿದ್ಯುತ್ ಸಮಸ್ಯೆಗಳು ಜನತೆಯನ್ನು ಕಾಡುತ್ತಿದೆ ಆದರೂ ಮತದಾರರ ಪರಿಸ್ಕರಣೆ ಕೆಲಸ ಉತ್ತಮವಾಗಿ ನಡೆದಿರುವುದು ತಾಲೂಕಾ ಆಡಳಿತದ ಕಾರ್ಯಕ್ಕೆ ಸಾಕ್ಸಿಯಾಗಿದೆ.

Banner Ad