Banner Ad

ಸುದ್ದಿ ಕನ್ನಡ ವಾರ್ತೆ

ಸಾಗರ: ತಾಲೂಕಿನ ವರದಹಳ್ಳಿಯ ಶ್ರೀಕ್ಷೇತ್ರ ಶ್ರೀಧರಾಶ್ರಮದಲ್ಲಿ ಡಿಸೆಂಬರ್ ೮ರಿಂದ ೧೫ರವರೆಗೆ ಶ್ರೀದತ್ತ ಜಯಂತಿ ಮತ್ತು ಶ್ರೀಧರ ಸ್ವಾಮಿಗಳ ೧೧೩ನೇ ಜಯಂತಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.

Banner Ad

೮ರಂದು ಗಣಪತಿ ಉಪನಿಷತ್ ಹವನ, ೯ರಂದು ಅತಿವಿಷ್ಣು ಮಹಾಯಾಗ, ೧೦ರಂದು ಗೋಸೂಕ್ತ ಹವನ, ೧೧ರಂದು ಗೀತಾ ಜಯಂತಿ ಪ್ರಯುಕ್ತ ಸಾಮೂಹಿಕ ಭಗವದ್ಗೀತಾ ಪಠಣ ಮತ್ತು ಪ್ರವಚನ ಕಾರ್ಯಕ್ರಮ ಇರುತ್ತದೆ. ೧೨ರಂದು ಅನ್ನಸೂಕ್ತ ಹವನ, ಸಂಜೆ ಪಲ್ಲಕ್ಕಿ ಉತ್ಸವ ಮತ್ತು ಅಷ್ಟಾವಧಾನ ಸೇವೆ, ೧೩ರಂದು ದಕ್ಷಿಣಮೂರ್ತಿ ಹವನ, ೧೪ರಂದು ದತ್ತಮಂತ್ರ ಮತ್ತು ಗುರುಮಂತ್ರಗಳಿಂದ ಹವನ, ಸಂಜೆ ಸತ್ಯದತ್ತ ವೃತಪೂಜೆ, ಶ್ರೀ ಸದ್ಗುರು ಸಮಾಧಿಗೆ ಶತರುದ್ರಾಭಿಷೇಕ, ಸಹಸ್ರ ತುಳಸಿ ಅರ್ಚನಾ ಪೂರ್ವಕ ಕಲ್ಪೋಕ್ತ ಪೂಜೆ, ಶ್ರೀದತ್ತ ಸದ್ಗುರು ಶ್ರೀಧರಸ್ವಾಮಿಗಳ ಜನ್ಮೋತ್ಸವ ಕಾರ್ಯಕ್ರಮ ನಡೆಯಲಿದೆ. ೧೫ರಂದು ಶ್ರೀದತ್ತ ಮಂತ್ರ ಮತ್ತು ಗುರುಮಂತ್ರ ಹವನಗಳ ಪೂರ್ಣಾಹುತಿ ಇರುತ್ತದೆ. ಎಂದು ವರದಪುರದ ಶ್ರೀಧರ ಮಹಾಮಂಡಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Banner Ad